ಇರಾಕ್-ಸಿರಿಯಾದಲ್ಲಿ ಐಎಸ್ ಉಗ್ರರ ವಿರುದ್ಧ ನಡೆದ ವಾಯು ದಾಳಿಯಲ್ಲಿ 64 ನಾಗರಿಕರ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

64-Killed-02

ವಾಷಿಂಗ್ಟನ್, ನ.10- ಇರಾಕ್ ಮತ್ತು ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಇತ್ತೀಚೆಗೆ ನಡೆದ ವಾಯು ದಾಳಿಯಲ್ಲಿ 64 ನಾಗರಿಕರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ ಎಂದು ಅಮೆರಿಕ ಸೇನೆ ವಿಷಾದ ವ್ಯಕ್ತಪಡಿಸಿದೆ.  ಈ ಎರಡೂ ದೇಶಗಳಲ್ಲಿ ಸೆ.10 ರಿಂದ ನ.20ರ ನಡುವೆ ಐಎಸ್ ಭಯೋತ್ಪಾದಕರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಯಿತು. ಈ ವಾಯು ಕಾರ್ಯಾಚರಣೆಯಲ್ಲಿ 64 ನಾಗರಿಕರು ಸಾವಿಗೀಡಾಗಿರುವುದು ದುರದೃಷ್ಟ ಸಂಗತಿ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್‍ನ ವಕ್ತಾರ ಕರ್ನಲ್ ಜಾನ್ ಥಾಮಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಕಳೆದ ಮಾರ್ಚ್‍ನಲ್ಲಿ ಇರಾಕ್‍ನ ಐಎಸ್ ಉಗ್ರರ ಶಸ್ತ್ರಾಸ್ತ್ರ ಕಾರ್ಖಾನೆ ಮೇಲೆ ನಡೆದ ವಾಯು ದಾಳಿಯಲ್ಲಿ 10 ನಾಗರಿಕರು ಬಲಿಯಾಗಿ, ಅನೇಕರು ಗಾಯಗೊಂಡಿದ್ದರು.  ಐಎಸ್ ಭಯೋತ್ಪಾದಕರ ವಿರುದ್ಧ 2014ರಿಂದ ನಡೆಯುತ್ತಿರುವ ಶಸ್ತ್ರಾಸ್ತ್ರ ಸಂಘರ್ಷದಲ್ಲಿ 114 ಮಂದಿ ಮೃತಪಟ್ಟು, 37 ಜನ ಗಾಯಗೊಂಡಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ಹೇಳಿಕೆ ನೀಡಿದೆಯಾದರೂ, ಅಮ್ನೆಸ್ಟಿ ಇಂಟರ್‍ನ್ಯಾಷನಲ್ ವರದಿಯಂತೆ ಈ ಅವಧಿಯಲ್ಲಿ 300 ನಾಗರಿಕರು ಹತರಾಗಿದ್ದಾರೆ.  ಅಮೆರಿಕ ಕಳೆದ ಎರಡು ವರ್ಷಗಳಿಂದ ಇರಾಕ್ ಮತ್ತು ಸಿರಿಯಾದಲ್ಲಿ ಒಟ್ಟು 12,354 ವಾಯು ದಾಳಿಗಳನ್ನು ನಡೆಸಿದೆ ಎಂದು ಸೇನೆ ಅಂಕಿ ಅಂಶ ತಿಳಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin