ಇರಾನ್‍ನಿಂದ 15 ಭಾರತೀಯ ಮೀನುಗಾರರ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Sushma-Swaraj

ನವದೆಹಲಿ, ಏ.3-ಕಳೆದ ವರ್ಷ ಬಂಧನಕ್ಕೆ ಒಳಗಾಗಿದ್ದ ಭಾರತದ 15 ಮಂದಿ ಮೀನುಗಾರರನ್ನು ಇರಾನ್ ಬಿಡುಗಡೆ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.   ಮೂರು ಬಹರೈನಿ ದೋಣಿಗಳೊಂದಿಗೆ ತಮಿಳುನಾಡಿನ 15 ಬೆಸ್ತರನ್ನು ಇರಾನ್ ಬಂಧಿಸಿತ್ತು. ಈಗ ಅವರನ್ನು ಬಿಡುಗಡೆಗೊಳಿಸಿರುವುದು ಸಂತಸದ ವಿಷಯ ಎಂದು ಅವರು ಟ್ವೀಟ್‍ನಲ್ಲಿ ಹೇಳಿದ್ದಾರೆ.   ಮೀನುಗಾರರನ್ನು ಬಿಡುಗಡೆಗೊಳಿಸಲು ಅನುವು ಮಾಡಿಕೊಟ್ಟ ಟೆಹ್ರಾನ್‍ನ ಭಾರತೀಯ ರಾಜತಾಂತ್ರಿಕ ಕಚೇರಿ ಸಿಬ್ಬಂದಿಗೆ ಸುಷ್ಮಾ ಕೃತಜ್ಞತೆ ಸಲ್ಲಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin