ಇರಾನ್ ಮಾಜಿ ಅಧ್ಯಕ್ಷ ರಫ್ಸಂಜಾನಿ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Iran-PPM

ಟೆಹರಾನ್, ಜ.9– ಇರಾನಿನ ಪ್ರಭಾವಿ ನಾಯಕ ಮತ್ತು ಮಾಜಿ ಅಧ್ಯಕ್ಷ ಅಕ್ಬರ್ ಹಾಶಿಮಿ ರಫ್ಸಂಜಾನಿ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಹೃದಯ ಸಮಸ್ಯೆಯಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇರಾನ್ ಮಾಧ್ಯಮಗಳು ನಿನ್ನೆ ಬೆಳಿಗ್ಗೆ ವರದಿ ಮಾಡಿದ್ದವು. ಸರ್ಕಾರಿ ದೂರದರ್ಶನ ತನ್ನ ಕಾರ್ಯಕ್ರಮಗಳ ನಡುವೆ ರಫ್ಸಂಜಾನಿ ನಿಧನ ವಾರ್ತೆ ಪ್ರಕಟಿಸಿತು.  ಬಹು ಕೋಟ್ಯಧೀಶರಾದ ಅವರು ಉದ್ಯಮ ಮತ್ತು ರಾಜಕೀಯ ರಂಗಗಳಲ್ಲಿ ತಮ್ಮ ಚಾಣಾಕ್ಷ ಕ್ರಮಗಳಿಂದಾಗಿ ಅಕ್ಚರ್ ಶಾ ಮತ್ತು ಗ್ರೇಟ್ ಕಿಂಗ್ ಎಂಬ ಬಿರುದುಗಳಿಗೂ ಪಾತ್ರರಾಗಿದ್ದರು.

ರಫ್ಸಂಜಾನಿ 1989 ರಿಂದ 1997ರವರೆಗೆ ಇರಾನ್ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. 2009 ರಿಂದ 2011ರವರೆಗೆ ಸಂಸತ್ ಪರಿಣಿತರ ಮಹಾಸಭೈಯ ಮುಖ್ಯಸ್ಥರೂ ಆಗಿ ರಫ್ಸಂಜಾನಿ ನೆರೆಹೊರೆ ದೇಶಗಳೊಂದಿಗೆ ಉತ್ತಮ ಸಂಬಂಧ ಸುಧಾರಣೆಗೆ ಶ್ರಮಿಸಿದ್ದರು.
ಗಣ್ಯರ ಸಂತಾಪ :
ರಫ್ಸಂಜಾನಿ ನಿಧನಕ್ಕೆ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ವಿವಿಧ ಪಕ್ಷಗಳ ಮುಖಂಡರು ಸೇರಿದಂತೆ ವಿವಿಧ ದೇಶಗಳ ನಾಯಕರು ಸಂತಾಪ ಸೂಚಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin