ಇರಾನ್ ಸಂಸತ್ ಮೇಲೆ ಉಗ್ರರ ದಾಳಿ, ಓರ್ವ ಭದ್ರತಾ ಸಿಬ್ಬಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Iran-Parliament

ಟೆಹ್ರಾನ್,ಜೂ.7- ಶಸ್ತ್ರ ಸಜ್ಜಿತ ಮೂವರು ಭಯೋತ್ಪಾದಕರು ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಇರಾನ್‍ನ ಸಂಸತ್ ಭವನದ ಆವರಣಕ್ಕೆ ನುಗ್ಗಿ ಕಟ್ಟಡದ ಮೇಲೆ ಯದ್ವಾತದ್ವ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ.   ಈ ಅನಿರೀಕ್ಷಿತ ದಾಳಿಯಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು ,ಇತರ ಮೂವರು ನಾಗರಿಕರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಸಂಸತ್ ಭವನದ ಎರಡು ಕಡೆಗಳಲ್ಲಿ ಮುಸುಕು ಧರಿಸಿದ್ದ ಮೂವರು ಬಂದೂಕುಧಾರಿಗಳು ಬಿಗಿಭದ್ರತೆಯ ನಡುವೆಯೂ ಸಂಸತ್ ಭವನದ ಆವರಣಕ್ಕೆ ನುಗ್ಗಿ ಈ ಕೃತ್ಯ ನಡೆಸಿದ್ದಾರೆ.ಉಗ್ರರ ಪೈಕಿ ಒಬ್ಬನು ಪಿಸ್ತೂಲ್ ಹೊಂದಿದ್ದರೆ ಉಳಿದಿಬ್ಬರು ಏಕೆ 47 ಬಂದೂಕುಗಳನ್ನು ಹಿಡಿದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಸಂಸತ್‍ನ ಎಲ್ಲ ದ್ವಾರಗಳನ್ನು ಮುಚ್ಚಿ ಉಗ್ರರು ಒಳಗೆ ಪ್ರವೇಶಸದಂತೆ ನಿರ್ಬಂಧಿಸಿದ್ದಾರೆ. ನಂತರ ಬಂದೂಕುಧಾರಿಗಳನ್ನು ಸುತ್ತುವರೆದು ಗುಂಡು ಹಾರಿಸಿದಾಗ ಮೂವರು ತೀವ್ರವಾಗಿ ಗಾಯಗೊಂಡು ನೆಲಕ್ಕುರುಳಿದರು. ಭದ್ರತಾ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯಿಂದ ಸಂಭಾವ್ಯ ದುರಂತ ತಪ್ಪಿದಂತಾಗಿದೆ.   ಇತ್ತೀಚೆಗೆ ಇರಾನ್‍ನಲ್ಲಿ ಐಎಸ್ ಉಗ್ರರ ಹಿಂಸಾಚಾರಗಳು ಹೆಚ್ಚುತ್ತಿವೆ. ಇನ್ನೊಂದು ಮೂಲದ ಪ್ರಕಾರ ಸಂಸತ್ ಆವರಣಕ್ಕೆ ನುಗ್ಗಿದ ಮೂವರಲ್ಲಿ ಒಬ್ಬನು ತನ್ನನ್ನು ತಾನೇ ಸ್ಫೋಟಿಸಿಕೊಂಡ ಎಂದು ಹೇಳಲಾಗಿದೆ. ಆದರೆ ಇದುವರೆಗೂ ಯಾವುದೇ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin