ಇರುವ ಅತಿಥಿ ಉಪನ್ಯಾಸಕರನ್ನು ಮುಂದುವರೆಸದೆ ಹೊಸ ನೇಮಕಾತಿ ಮಾಡಿಕೊಳ್ಳುತ್ತಿರುವುದಕ್ಕೆ ಖಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

Recruitment

ಬೆಂಗಳೂರು, ಜೂ.27- ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅತಿಥಿ ಉಪನ್ಯಾಸಕರನ್ನು ಮುಂದುವರೆಸದೆ ಹೊಸದಾಗಿ ನೇಮಕಾತಿ ಮಾಡಿಕೊಳ್ಳಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿರುವುದು ಸರ್ಕಾರಿ ಪ್ರಥಮ ದರ್ಜೆ ಅತಿಥಿ ಉಪನ್ಯಾಸಕರ ಸಂಘ ಖಂಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ರಾಜಶೇಖರ್‍ಮೂರ್ತಿ, ರಾಜ್ಯಾಧ್ಯಕ್ಷ ಶ್ರೀನಿವಾಸಾಚಾರ್, ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ, ಅತಿಥಿ ಉಪನ್ಯಾಸಕರಿಗೆ ವರ್ಷದ 12 ತಿಂಗಳು ತಲಾ 25 ಸಾವಿರ ರೂ. ಮಾಸಿಕ ವೇತನ ನೀಡಬೇಕು. ಎಂಪಿಎಲ್ ಪದವಿಯನ್ನು ನೆಟ್, ಪಿಎಚ್‍ಡಿ, ಸ್ಲೇಟ್ ಪದವಿಗೆ ಸಮಾನಾಂತರವಾಗಿ ಪರಿಗಣಿಸಿ ವೇತನ ನೀಡಬೇಕು. ಮಹಿಳಾ ಅತಿಥಿ ಉಪನ್ಯಾಸಕರಿಗೆ ವೇತನ ಸಹಿತ ಮೂರು ತಿಂಗಳು ರಜೆ ಕೊಡಬೇಕು.

ಅತಿಥಿ ಉಪನ್ಯಾಸಕರಿಗೆ ಸೇವೆ ಭದ್ರತೆ ರೂಪಿಸಲು ಈಗಿರುವ ಕಾನೂನು ತೊಡಕು ನಿವಾರಿಸುವ ಸಲುವಾಗಿ ತಜ್ಞರ ಸಮಿತಿ ರಚಿಸಬೇಕು. ಹೆಚ್ಚುವರಿ ಹುದ್ದೆಗಳಿದ್ದೆಗೆ ಅವುಗಳನ್ನು ಪಕ್ಕದ ಕಾಲೇಜುಗಳಿಗೆ ವರ್ಗಾಗಣೆ ಮಾಡಬೇಕು ಎಂದು ಒತ್ತಾಯಿಸಿದರು.  ಪ್ರತೀ ವರ್ಷವೂ ಇದೇ ರೀತಿಯ ಗೊಂದಲಗಳನ್ನು ಸೃಷ್ಟಿಸಿ ಅತಿಥಿ ಉಪನ್ಯಾಸಕರನ್ನು ಆತಂಕದಲ್ಲಿಡಲಾಗಿದೆ. ಇದನ್ನು ಕೈ ಬಿಡಬೇಕು. ಈಗ ಕರೆದಿರುವ ಆನ್‍ಲೈನ್ ಅರ್ಜಿ ಕೈ ಬಿಟ್ಟು ಹಿಂದೆ ಕೆಲಸ ಮಾಡುತ್ತಿದ್ದವರನ್ನು ಮುಂದುವರೆಸಬೇಕೆಂದು ಆಗ್ರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin