ಇವರೇ ಗೌರಿ ಹಂತಕರು…!

ಈ ಸುದ್ದಿಯನ್ನು ಶೇರ್ ಮಾಡಿ

Gouri-Lankesh-Killers-02


ಬೆಂಗಳೂರು, ಅ.14- ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಸಂಬಂಧ ಯಾವುದೇ ಸುಳಿವು ಸಿಗದೇ ಇದುದ್ದರಿಂದ ಕೊನೆಗೆ ಸಾರ್ವಜನಿಕರ ಮೊರೆ ಹೋಗಿರುವ ವಿಶೇಷ ತನಿಖಾ ದಳ ಇಂದು ಶಂಕಿತ ಆರೋಪಿಗಳ ರೇಖಾ ಚಿತ್ರ ಮತ್ತು ವೀಡಿಯೋ ಪುಟೇಜನ್ನು ಬಿಡುಗಡೆ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿಂದು ವಿಶೇಷ ತನಿಖಾ ದಳದ ಐಜಿ ವಿ.ಕೆ.ಸಿಂಗ್, ಎಸ್‍ಪಿಗಳಾದ ಅನುಚೇತ್ ಮತ್ತು ಹರೀಶ್‍ಪಾಂಡೆ, ಇಬ್ಬರು ಶಂಕಿತ ಆರೋಪಿಗಳ ಮೂರು ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿದರು.

ಈ ಆರೋಪಿಗಳು ಗೌರಿ ಹತ್ಯೆಗೂ ಮುನ್ನ ಒಂದು ವಾರ ಬೆಂಗಳೂರಿನಲ್ಲೇ ನೆನೆಸಿರುವ ಶಂಕೆ ಇದೆ. ಹತ್ಯೆ ದಿನ ಗೌರಿಲಂಕೇಶ್ ಅವರ ಮನೆ ಸುತ್ತಮುತ್ತ ಬೈಕ್‍ನಲ್ಲಿ ಒಬ್ಬ ವ್ಯಕ್ತಿ ಅನುಮಾಸ್ಪದವಾಗಿ ಓಡಾಡಿದ್ದಾನೆ. ಈ ರೇಖಾ ಚಿತ್ರಗಳನ್ನು ಸಿಸಿ ಟಿವಿ ದೃಶ್ಯಾವಳಿಗಳು ಮತ್ತು ಪ್ರತ್ಯಕ್ಷ ದರ್ಶಿಗಳ ಮಾಹಿತಿ ಆಧರಿಸಿ ನಿಪುಣ ಕಲಾವಿದರುಗಳು 48 ಗಂಟೆಗಳ ಕಾಲ ಒಂದು ಚಿತ್ರವನ್ನು ಬಿಡಿಸಿದ್ದಾರೆ. ಇದು ನರೇಂದ್ರ ದಾಬೋಲ್ಕರ್ ಪ್ರಕರಣದಲ್ಲಿ ಸಿಬಿಐ ಬಿಡುಗಡೆ ಮಾಡಿರುವ ಶಂಕಿತ ಆರೋಪಿಗಳ ರೇಖಾ ಚಿತ್ರಗಳಿಗಿಂತಲೂ ಹೆಚ್ಚು ಗುಣಮಟ್ಟ ಹೊಂದಿವೆ. ಹೀಗಾಗಿ ಸಾರ್ವಜನಿಕರು ರೇಖಾ ಚಿತ್ರಗಳಲ್ಲಿರುವ ವ್ಯಕ್ತಿಗಳನ್ನು ನೋಡಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಅವರು ವಾಸಿಸುತ್ತಿದ್ದ ಮನೆಗಲ ಸುತ್ತಮುತ್ತಲಿನ ಸಾರ್ವಜನಿಕರು, ಹೋಟೆಲ್‍ನಲ್ಲಿ ತಂಗಿದ್ದರೆ ಅಲ್ಲಿನ ನೋಡಿರುವವರು ತಮಗೆ ಮಾಹಿತಿ ನೀಡುವಂತೆ ಮನವಿ ಸಿಂಗ್ ಮನವಿ ಮಾಡಿದರು. ಜತೆಗೆ ಆರೋಪಿಗಳು ಬಳಸಿದ ಮೋಟಾರ್ ಬೈಕ್‍ನ ಮಾಹಿತಿ ಬಹಿರಂಗ ಪಡಿಸಲಾಗಿದ್ದು, ಅದರ ಬಗ್ಗೆಯೂ ಸಾರ್ವಜನಿಕರು ತಮಗೆ ತಿಳಿದಿರುವ ವಿಷಯವನ್ನು ಹಂಚಿಕೊಳ್ಳಬೇಕೆಂದು ಮನವಿ ಮಾಡಿದರು.

ಆಯುಧಗಳಲ್ಲಿ ಸಾಮ್ಯತೆ ಇಲ್ಲ:

ಎಂ.ಎಂ.ಕಲಬುರಗಿ, ನರೇಂದ್ರ ದಾಬೋಲ್ಕರ್ ಹತ್ಯೆಯಲ್ಲಿ ಬಳಸಲಾದ ಬಂದೂಕು ಮತ್ತು ಗುಂಡಿಗೂ ಹಾಗೂ ಗೌರಿ ಹತ್ಯೆಯಲ್ಲಿ ಬಳಸಲಾದ ಆಯುಧಕ್ಕೂ ಸಾಮ್ಯತೆ ಕಂಡು ಬಂದಿಲ್ಲ. ಈ ಬಗ್ಗೆ ನಿಖರವಾದ ಮಾಹಿತಿಗಳು ಸಿಕ್ಕಿಲ್ಲ. ಗೌರಿ ಹತ್ಯೆಗೆ 7.65ಕಂಟ್ರಿಮೇಡ್ ಪಿಸ್ತೂಲನ್ನು ಬಳಸಲಾಗಿದೆ ಎಂದು ಸ್ಪಷ್ಟ ಎಂದು ಹೇಳಿದರು.

ಹತ್ಯೆಗೆ ವೃತ್ತಿ ದ್ವೇಷ ಕಾರಣವಲ್ಲ:

ಗೌರಿ ಲಂಕೇಶ್ ಹತ್ಯೆಗೆ ವೃತ್ತಿಪರ ವೈಶಮ್ಯಗಳು ಕಾರಣ ಅಲ್ಲ ಎಂದು ಸುದೀರ್ಘ ತನಿಖೆ ನಡೆಸಿರುವ ಎಸ್‍ಐಟಿ ಸ್ಪಷ್ಟಪಡಿಸಿದೆ. ಪ್ರಕರಣವನ್ನು ವಿವಿಧ ದೃಷ್ಟಿಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ವೈಯಕ್ತಿಕ ಕಾರಣಗಳು, ಅ

Facebook Comments

Sri Raghav

Admin