ಇವಿಎಂ ಪರೀಕ್ಷೆ ಆರಂಭ : ಹ್ಯಾಕಥಾನ್ ಫಲಿತಾಂಶಕ್ಕಾಗಿ ಹೆಚ್ಚಿದ ಕುತೂಹಲ

ಈ ಸುದ್ದಿಯನ್ನು ಶೇರ್ ಮಾಡಿ

Voting-Machine--01

ನವದೆಹಲಿ, ಜೂ.3- ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಲು ಸಾಧ್ಯವಿಲ್ಲ ಎಂಬುದನ್ನು ದೃಢಪಡಿಸುವ ಸಲುವಾಗಿ ಚುನಾವಣಾ ಆಯೋಗವು ನಡೆಸುತ್ತಿರುವ ಹ್ಯಾಕಥಾನ್ ಫಲಿತಾಂಶ ಕುತೂಹಲ ಕೆರಳಿಸಿದೆ.  ರಾಜಕೀಯ ಪಕ್ಷಗಳು ಚುನಾವಣಾ ಆಯೋಗ ಒಡ್ಡಿರುವ ಸವಾಲುಗಳನ್ನು ಸ್ವೀಕರಿಸಿದ್ದು, ಇವಿಎಂ ದೋಷಗಳನ್ನು ತೋರಿಸಲು ಪ್ರಯತ್ನ ನಡೆಸಿದರು.   ಹ್ಯಾಕಥಾನ್‍ಗೆ ತಡೆಯಾಜ್ಞೆ ತರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಉತ್ತರಾಖಂಡ್ ಹೈಕೋರ್ಟ್ ತಳ್ಳಿ ಹಾಕಿದ್ದು, ಹೀಗಾಗಿ ಅಂದುಕೊಂಡಂತೆಯೇ ಹ್ಯಾಕಥಾನ್ ನಡೆಯುತ್ತಿದೆ.ಇತ್ತೀಚಿನ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಬಳಸಲಾಗಿದ್ದ 14 ಇವಿಎಂಗಳನ್ನು ಆಯೋಗವು ಸಿದ್ಧಪಡಿಸಿಕೊಂಡಿದೆ. ಅದರಂತೆ ನಾವು ಹಾಕಿರುವ ಷರತ್ತಿಗೆ ಅನುಗುಣವಾಗಿ ಎನ್‍ಸಿಪಿ ಮತ್ತು ಸಿಪಿಎಂ ಪ್ರತಿನಿಧಿಗಳು ಈ ಇವಿಎಂಗಳ ಪೈಕಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಅದನ್ನು ತಿರುಚಲು ಯತ್ನಿಸಬಹುದು. ಇದಕ್ಕಾಗಿ 4 ಗಂಟೆಗಳ ಕಾಲಾವಕಾಶ ನೀಡಲಾಗು ವುದು ಎಂದು ಆಯೋಗ ತಿಳಿಸಿತ್ತು.

ಇದಕ್ಕೂ ಮೊದಲು ಕಾಂಗ್ರೆಸ್ ಅಭ್ಯರ್ಥಿಯೊಬ್ಬರ ಅರ್ಜಿ ವಿಚಾರಣೆ ನಡೆಸಿದ್ದ ಉತ್ತರಾಖಂಡ್ ಹೈಕೋರ್ಟ್, ಆಯೋಗ ಆಯೋಜಿಸಿರುವ ಹ್ಯಾಕಥಾನ್ ಸಂವಿಧಾನಕ್ಕೆ ವಿರುದ್ಧವಾದದ್ದು. ಅದನ್ನು ರದ್ದುಮಾಡಿ ಎಂದು ಹೇಳಿತ್ತು. ನಂತರ ಈ ಕುರಿತು ಆಯೋಗದ ಪ್ರಕ್ರಿಯೆಯನ್ನೂ ಕೋರಿತ್ತು. ಆಯೋಗದ ಪ್ರತಿಕ್ರಿಯೆಯನ್ನು ಆಲಿಸಿದ ಬಳಿಕ, ಹ್ಯಾಕಥಾನ್‍ಗೆ ತಡೆಯಾಜ್ಞೆ ತರಲು ನಿರಾಕರಿಸಿ ಅರ್ಜಿ ವಜಾ ಮಾಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin