ಇಸ್ತಾನ್‍ಬುಲ್‍ನಲ್ಲಿ ಅವಳಿ ಬಾಂಬ್ ಸ್ಫೋಟ : 29 ಮಂದಿ ಸಾವು, 166 ಜನರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Blast-29-Killled

ಇಸ್ತಾನ್‍ಬುಲ್, ಡಿ.11-ಎರಡು ಬಾಂಬ್ ಸ್ಪೋಟಗಳಲ್ಲಿ ಪೊಲೀಸ್ ಅಧಿಕಾರಿಗಳೂ ಸೇರಿದಂತೆ 29ಕ್ಕೂ ಹೆಚ್ಚು ಮಂದಿ ಬಲಿಯಾಗಿ, 166 ಜನ ಗಾಯಗೊಂಡಿರುವ ಘಟನೆ ಟರ್ಕಿಯ ಇಸ್ತಾನ್‍ಬುಲ್‍ನಲ್ಲಿ ನಡೆಸಿದೆ. ಈ ಬಾಂಬ್ ದಾಳಿ ಪ್ರಕರಣಗಳ ಸಂಬಂಧ 10ಕ್ಕೂ ಹೆಚ್ಚು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.  ಬೆಸಿಕ್‍ಟಾಸ್ ಫುಟ್ಬಾಲ್ ಸ್ಟೇಡಿಯಂ ಹೊರಗೆ ಮೊದಲ ಕಾರ್ ಬಾಂಬ್ ಸ್ಫೋಟಗೊಂಡಿತು. ಇದಾದ 45 ಸೆಕೆಂಡ್‍ಗಳ ನಂತರ ಸುೀಪದ ಮಕ್ಕಾ ಪಾರ್ಕ್ ಬಳಿ ಆತ್ಮಹತ್ಯಾ ಬಾಂಬರ್ ಒಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡ. ಈ ಅವಳಿ ಬಾಂಬ್ ಸ್ಫೋಟಗಳಲ್ಲಿ 27 ಪೊಲೀಸರು ಮತ್ತು ಇಬ್ಬರು ನಾಗರಿಕರು ಹತರಾದರು ಎಂದು ಟರ್ಕಿ ಗೃಹ ಸಚಿವ ಸುಲೇಮಾನ್ ಸೊಯ್ಲು ತಿಳಿಸಿದ್ದಾರೆ.

ಗಾಯಗೊಂಡ 166 ಮಂದಿ ಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.  ಈ ಎರಡೂ ಬಾಂಬ್ ಸ್ಫೋಟಗಳನ್ನು ಇಸ್ಲಾುಕ್ ಸ್ಟೇಟ್ (ಐಎಸ್) ಉಗ್ರರು ನಡೆಸಿರುವುದು ದೃಢಪಟ್ಟಿದೆ. ಈ ಸಂಬಂಧ ಬಂಧಿತರನ್ನು ಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin