ಇಸ್ರೇಲ್ ದಾಳಿಗೆ 11 ಇರಾನಿಗಳೂ ಸೇರಿ 27 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Iran

ಬೈರುತ್, ಮೇ 12- ಹಿಂಸಾಚಾರ ಮತ್ತು ಯುದ್ಧಪೀಡಿತ ಸಿರಿಯಾ ಮೇಲೆ ಇಸ್ರೇಲ್ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ 11 ಇರಾನಿಗಳೂ ಸೇರಿದಂತೆ 27 ಹೋರಾಟಗಾರರು ಹತರಾಗಿದ್ದಾರೆ.  ಇಸ್ರೇಲ್ ನಡೆಸಿದ ವಾಯು ಮತ್ತು ಕ್ಷಿಪಣಿ ದಾಳಿಯಲ್ಲಿ ಆರು ಸಿರಿಯಾ ಯೋಧರು ಹಾಗೂ 11 ಇರಾನಿಗಳೂ ಸೇರಿದಂತೆ 21 ವಿದೇಶಿ ಹೋರಾಟಗಾರರು ಸಾವಿಗೀಡಾಗಿದ್ದಾರೆ ಎಂದು ಬ್ರಿಟನ್ ಮೂಲದ ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯದ ನಿರ್ದೇಶಕ ರಮಿ ಅಬ್ದೆಲ್ ರೆಹಮಾನ್ ಹೇಳಿದ್ದಾರೆ. ಇಸ್ರೇಲ್ ಆಕ್ರಮಿತ ಪ್ರದೇಶದ ಮೇಲೆ ಇರಾನ್ ಪಡೆಗಳು ನಡೆಸಿದ ರಾಕೆಟ್ ದಾಳಿಗಳಿಗೆ ಪ್ರತೀಕಾರವಾಗಿ ಈ ಆಕ್ರಮಣ ನಡೆದು ಸಾವು-ನೋವು ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin