ಇಸ್ರೇಲ್ ರಾಜಧಾನಿ ಜೆರುಸಲೆಂ ಘೋಷಣೆಗೆ ಟ್ರಂಪ್ ಸಜ್ಜು : ಹೊಸ ಬಿಕ್ಕಟ್ಟು ಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಡಿ.6-ಕೆಲವು ನಿರ್ಧಾರಗಳಿಂದ ವಿವಾದಗಳಿಗೆ ಗುರಿಯಾಗಿರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಇಸ್ರೇಲ್ ರಾಜಧಾನಿಯನ್ನಾಗಿ ಟೆಲ್‍ಅವಿವ್ ಬದಲು ಜೆರುಸಲೆಂನನ್ನು ಗುರುತಿಸಲು ಮುಂದಾಗಿದ್ದಾರೆ. ಟ್ರಂಪ್ ಅವರ ಈ ನಡೆ ಭಾರೀ ಬಿಕ್ಕಟ್ಟಿಗೆ ಎಡೆ ಮಾಡಿಕೊಡುವ ಸ್ಪಷ್ಟ ಸೂಚನೆಗಳು ಲಭಿಸಿವೆ. ಟ್ರಂಪ್ ಅವರು ಇಸ್ರೇಲ್ ರಾಜಧಾನಿಯನ್ನಾಗಿ ಜೆರುಸಲೆಂನನ್ನು ಮಾನ್ಯ ಮಾಡಲಿದ್ದಾರೆ ಹಾಗೂ ಅಮೆರಿಕದ ರಾಯಭಾರಿ ಕಚೇರಿಯನ್ನು ಟೆಲ್‍ಅವಿವ್‍ನಿಂದ ಜೆರುಸಲೆಂಗೆ ಸ್ಥಳಾಂತರಿಸಲು ವಿದೇಶಾಂಗ ಇಲಾಖೆಗೆ ಸೂಚನೆ ನೀಡಲಿದ್ದಾರೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಇಂದು ರಾತ್ರಿ ಟ್ರಂಪ್ ಅಧಿಕೃತ ಘೋಷಣೆ ಹೊರಡಿಸುವ ಸಾಧ್ಯತೆ ಇದೆ. ಪ್ರಾಚೀನ ಕಾಲದಿಂದಲೂ ಜೆರುಸಲೆಂ ಯಹೂದಿಯರಿಗೆ ರಾಜಧಾನಿಯಾಗಿದೆ. ಅಲ್ಲದೇ ಈಗಲೂ ಅಲ್ಲಿ ಸರ್ಕಾರದ ಕೇಂದ್ರ ಕಚೇರಿ, ಪ್ರಮುಖ ಸಚಿವಾಲಯಗಳು ಮತ್ತು ಸುಪ್ರೀಂಕೋರ್ಟ್ ಇದೆ. ಹೀಗಾಗಿ ಟ್ರಂಪ್ ಟೆಲ್‍ಅವಿವ್ ಬದಲು ಜೆರುಸಲೆಂನನ್ನೇ ಇಸ್ರೇಲ್ ರಾಜಧಾನಿಯಾಗಿ ಪರಿಗಣಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟ್ರಂಪ್‍ರ ಈ ನಡೆಯಿಂದ ಇಸ್ರೇಲ್‍ನಲ್ಲಿ ರಾಜತಾಂತ್ರಿಕ ಬಿಕ್ಕಟ್ಟುಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ಇಸ್ರೇಲ್‍ನಲ್ಲಿರುವ ಮುಸ್ಲಿಮರು, ಯಹೂದಿಗಳು ಮತ್ತು ಕ್ರೈಸ್ತರ ನಡುವೆ ದೊಡ್ಡ ಭಿನ್ನಾಭಿಪ್ರಾಯಗಳಿಗೂ ಕಾರಣವಾಗಲಿದೆ.

Facebook Comments

Sri Raghav

Admin