ಇಸ್ರೋದಿಂದ ಮೇ 5ಕ್ಕೆ ದಕ್ಷಿಣ ಏಷ್ಯಾ ಉಪಗ್ರಹ ಉಡಾವಣೆ, ಹೊರಗುಳಿದ ಪಾಕ್

ಈ ಸುದ್ದಿಯನ್ನು ಶೇರ್ ಮಾಡಿ

ISRO--0121

ನವದೆಹಲಿ, ಏ.15- ಈಗಾಗಲೇ 108 ಉಪಗ್ರಹಗಳನ್ನು ಏಕಕಾಲಕ್ಕೆ ನಭಕ್ಕೆ ಉಡಾವಣೆ ಮಾಡಿ ವಿಶ್ವವಿಕ್ರಮ ಸಾಧಿಸಿದರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಅಂತರಿಕ್ಷ ಉಪ ಕ್ರಮಕ್ಕೆ ಮುಂದಾಗಿದೆ. ದಕ್ಷಿಣ ಏಷ್ಯಾ ಪ್ರಾಂತ್ಯದ ಎಲ್ಲ ದೇಶಗಳಿಗೂ ಪ್ರಯೋಜನವಾಗುವ ಉದ್ದೇಶದ ಸೌತ್ ಏಷ್ಯನ್ ಸ್ಯಾಟಿಲೈಟ್ ಯೋಜನೆಗೆ ಇಸ್ರೋ ನೇತೃತ್ವ ವಹಿಸಿದೆ. ಆದರೆ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಪಾಕಿಸ್ತಾನವನ್ನು ದೂರವಿಡಲಾಗಿದೆ.ಇಸ್ರೋದ ಈ ಯೋಜನೆಯನ್ನು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಖಚಿತಪಡಿಸಿರುವ ಸಂಸ್ಥೆಯ ಮುಖ್ಯಸ್ಥ ಎ.ಎಸ್.ಕಿರಣ್ ಕುಮಾರ್, ಮೇ ಮೊದಲ ವಾರದಲ್ಲಿ ದಕ್ಷಿಣ ಏಷ್ಯಾ ಉಪಗ್ರಹ ಉಡಾವಣೆಯಾಗಲಿದೆ ಎಂದು ತಿಳಿಸಿದ್ದಾರೆ. ಈ ಯೋಜನೆ ಬಗ್ಗೆ ಉತ್ಸಾಹ ತೋರದ ಕಾರಣ ಪಾಕಿಸ್ತಾನವನ್ನು ಕೈಬಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin