ಇಸ್ರೋದಿಂದ ಸ್ಕ್ರ್ಯಾಮ್ ಜೆಟ್ ರಾಕೆಟ್ ಯಶಸ್ವಿ ಉಡಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

Scramjet

ಚೆನ್ನೈ, ಆ.28- ಎಂಜಿನ್ ಇಂಧನವಾಗಿ ದಹಿಸಲು ವಾತಾವರಣದಲ್ಲಿನ ಆಮ್ಲಜನಕವನ್ನು ಕೊಂಡೊಯ್ಯುವ ದೇಶೀಯ ನಿರ್ಮಿತ ಎಂಜಿನ್ ಆದ ಸ್ಕ್ರಾಮ್ಜೆಟ್ನನ್ನು ಪರೀಕ್ಷಾರ್ಥ ಉಡಾವಣೆ ಮಾಡುವಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಯಶಸ್ವಿಯಾಗಿದ್ದು, ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ.  ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (ಎಸ್ಡಿಎಸ್ಸಿ) ರಾಕೆಟ್ ಪೋರ್ಟ್ನಿಂದ ಇಂದು ಬೆಳಗ್ಗೆ ಎರಡು ಸ್ಕ್ರಾಮ್ಜೆಟ್ಗಳನ್ನು ಯಶಸ್ವಿಯಾಗಿ ಉಡ್ಡಯನ ಮಾಡಲಾಯಿತು ಎಂದು ಇಸ್ರೋ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಯೋಜನೆ ಯಶಸ್ವಿಯಾಗಿದೆ. ಹಾರಾಟದ ಸಂದರ್ಭದಲ್ಲಿ ಎರಡು ಸ್ಕ್ರಾಮ್ಜೆಟ್ ಎಂಜಿನ್ಗಳನ್ನು ಪರೀಕ್ಷಿಸಲಾಗಿದೆ. ರಾಕೆಟ್ಗಳ ಹಾರಾಟಕ್ಕೆ ಸ್ಕ್ರಾಮ್ಜೆಟ್ ಎಂಜಿನ್ಗಳು 55 ಸೆಕೆಂಡ್ಗಳ ಕಾಲ ದಹಿಸಲ್ಪಟ್ಟಿವೆ. ಈ ಎರಡು ಎಂಜಿನ್ಗಳನ್ನು ಆರು ಸೆಕೆಂಡ್ಗಳ ಕಾಲ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.

ಒಂದು ರಾಕೆಟ್ ಹಾರಾಟದ ವಾತಾವರಣದ ಹಂತದ ಸಂದರ್ಭದಲ್ಲಿ ಮಾತ್ರ ಎಂಜಿನ್ನನ್ನು ಬಳಕೆ ಮಾಡಲಾಗುತ್ತದೆ. ಇಂಧನವನ್ನು ತನ್ನೊಂದಿಗೆ ಆಕ್ಸಿಡೈಸರ್ (ಆಮ್ಲಜನಕ ವಾಹಕ) ಕೊಂಡೊಯ್ಯಲು ತಗಲುವ ಮೊತ್ತವನ್ನು ಕಡಿಮೆ ಮಾಡುವ ಮೂಲಕ ಉಡಾವಣೆ ವೆಚ್ಚವನ್ನು ತಗ್ಗಿಸುತ್ತಾರೆ. ಹೈಪರ್ಸಾನಿಕ್ ಸ್ಪೀಡ್ನಲ್ಲಿ ಇಸ್ರೋದ ಮರುಬಳಕೆಯ ಉಡಾವಣಾ ವಾಹನಕ್ಕೆ (ಆರ್ಎಲ್ವಿ) ಶಕ್ತಿ ತುಂಬಲು ಇದನ್ನು ಬಳಸಬಹುದಾಗಿದೆ.

ವಾತಾವರಣದ ಆಮ್ಲಜನಕವನ್ನು ಬಳಸುವ ಮೂಲಕ ಎಂಜಿನ್, ಲಿಫ್ಟ್-ಆಫ್ (ಗಗನಕ್ಕೆ ಚಿಮ್ಮಿಸುವ) ವೇಳೆ ವಾಹನದ ತೂಕವನ್ನು ಅರ್ಧಕ್ಕಿಂತ ಹೆಚ್ಚು ಕಡಿಮೆ ಮಾಡುತ್ತದೆ. ಇದರಿಂದ ಕಕ್ಷೆಗೆ ಭಾರೀ ತೂಕದ ಪೆಲೋಡ್ಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ. ಅತ್ಯಧಿಕ ವೇಗದಲ್ಲಿ ಚಲಿಸುವ ಉಡ್ಡಯನ ವಾಹನಗಳಿಗೆ ಸ್ಕ್ರಾಮ್ಜೆಟ್ ಎಂಜಿನ್ಗಳು ಸೂಕ್ತವಾಗಿವೆ ಎಂದು ಇಸ್ರೋ ವಿಜ್ಞಾನಿಗಳು ವಿವರಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin