ಈಗ ನೀವೂ ಬಿಗ್‍ಬಾಸ್ ಮನೆಯಲ್ಲಿ ಉಳಿದುಕೊಳ್ಳಬಹುದು..! ಹೇಗೆ, ಇಲ್ಲಿದೆ ನೋಡಿ ಉತ್ತರ

ಈ ಸುದ್ದಿಯನ್ನು ಶೇರ್ ಮಾಡಿ

Bigg-Boss-House

ಬೆಂಗಳೂರು, ಏ.8-ರಾಜ್ಯಾದ್ಯಂತ ಭಾರೀ ಪ್ರೇಕ್ಷರನ್ನು ಸೆಳೆದ ಬಿಗ್‍ಬಾಸ್ ರಿಯಾಲಿಟಿ ಶೋ ನಡೆದ ಇಲ್ಲಿನ ಇನ್ನೋವೇಟಿವ್ ಫಿಲಂ ಸಿಟಿಯ ಸೆಟ್(ಮನೆ)ನಲ್ಲಿ ಒಂದು ದಿನ ಉಳಿದುಕೊಂಡು ಸಾರ್ವಜನಿಕರೂ ಕೂಡ ತಮ್ಮ ಅನುಭವವನ್ನು ಹಂಚಿಕೊಳ್ಳಬಹುದು.   ಇಂತಹ ಒಂದು ಅಪರೂಪದ ಯೋಜನೆಯನ್ನು ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಆರಂಭಿಸಲಾಗಿದೆ ಎಂದು ಇದರ ಕಾರ್ಯನಿರ್ವಾಹಕ ಅಧಿಕಾರಿ ಉಪಾಸನಾ ಮಿಥಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸ್ನೇಹಿತರು, ಕುಟುಂಬ ಸದಸ್ಯರು ಈ ಅಹ್ಲಾದಕರ ಮನೆಯಲ್ಲಿ ಒಂದು ದಿನ ನೆಲಸಬಹುದು. ಆದರೆ, ಇದಕ್ಕೆ ಕೆಲವೊಂದು ನಿಬಂಧನೆಗಳು ಒಳಪಟ್ಟಿವೆ ಎಂದು ಹೇಳಿದರು.

ಹದಿನಾರು ವರ್ಷ ಮೇಲ್ಪಟ್ಟ 15ರಿಂದ 20 ಮಂದಿ ಸದಸ್ಯರು ಇಲ್ಲಿ ಬಿಗ್‍ಬಾಸ್ ರಿಯಾಲಿಟಿ ಶೋ ರೀತಿಯಲ್ಲೇ ನಟಿಸಬಹುದು. ಇದಕ್ಕೆ ನೋಂದಾಯಿಸಿಕೊಳ್ಳುವ ಸದಸ್ಯರು ಫಿಲಂಸಿಟಿಯನ್ನು ಕೂಡ ಉಚಿತವಾಗಿ ನೋಡಬಹುದು.  ಕಳೆದ ಆವೃತ್ತಿಯ ಬಿಗ್‍ಬಾಸ್‍ನಲ್ಲಿ ಸುದೀಪ್ ಅವರು ಸಾಕಷ್ಟು ಮೆಚ್ಚುಗೆ ಪಡೆದಿದ್ದರು. ಅನೇಕರು ಈ ಮನೆಯನ್ನು ನೋಡಬೇಕೆಂದು ಕಾತುರರಾಗಿದ್ದರು. ಅದಕ್ಕಾಗಿ ನಾವು ಇಂತಹ ಹೊಸ ಯೋಜನೆಯನ್ನು ಕಲ್ಪಿಸಿದ್ದೇವೆ ಎಂದರು.

ಬಿಗ್‍ಬಾಸ್ ಮನೆಗೆ ಸಂಜೆ 6ಕ್ಕೆ ಎಂಟ್ರಿ ಕೊಟ್ಟರೆ ಬೆಳಗ್ಗೆ 10 ಗಂಟೆಗೆ ಹೊರ ಬರಬಹುದು. ಅಲ್ಲಿ ನಿಮಗೆ ಕೆಲವೊಂದು ಆಟ(ಟಾಸ್ಕ್)ಗಳನ್ನು ಸಹ ಆಡಿಸಲಾಗುತ್ತದೆ. ಅದಕ್ಕೆ ಬೇಕಾದ ವಸ್ತುಗಳನ್ನು ನೀಡಲಾಗುತ್ತದೆ. ನಿಮ್ಮ ಆವಾ-ಭಾವಗಳನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಗುವುದು. ಈ ಬಿಗ್‍ಬಾಸ್ ಪ್ರವಾಸಿ ಪ್ಯಾಕೇಜ್ ಒಬ್ಬರಿಗೆ 2ಸಾವಿರ ರೂ. ನಿಗದಿ ಪಡಿಸಲಾಗಿದೆ. ಆದರೆ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಅದು 3 ಸಾವಿರ ರೂ. ಆಗಿರುತ್ತದೆ ಎಂದು ಅವರು ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin