ಈಜಲು ಹೋದ ವ್ಯಕ್ತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

water--missing man

ಮಳವಳ್ಳಿ, ಅ.18- ನದಿಯಲ್ಲಿ ಈಜಲು ಇಳಿದ ಆಟೋ ಚಾಲಕನೋರ್ವ ನೀರುಪಾಲಾಗಿರುವ ಘಟನೆ ಹಲಗೂರು ಸಮೀಪದ ಮುತ್ತತ್ತಿಯಲ್ಲಿ ಜರುಗಿದೆ. ಮೂಲತಃ ಹೊಸ ಕಬ್ಬಾಳು ಗ್ರಾಮದ ವಾಸಿಯಾದ ಕೆ.ಕೃಷ್ಣ (48) ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ದೈವಿ. ಬೆಂಗಳೂರಿನ ಆಟೋ ಚಾಲಕರ ತಂಡವೊಂದು ವಿಹಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಜರುಗಿದೆ. ನಿನ್ನೆ ಮಧ್ಯಾಹ್ನ ಈ ಆಟೋಚಾಲಕರ ತಂಡದ ಕೆಲವರು ಕಾವೇರಿ ನದಿಯಲ್ಲಿ ಈಜಲು ನದಿಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಆಳವಾದ ಜಾಗದಲ್ಲಿ ಈಜಲು ಹೋದ ಕೆ. ಕೃಷ್ಣ ಅವರು ನೀರಿನ ಸೆಳತಕ್ಕೆ ಸಿಕ್ಕಿ ಪಾರಾಗಲಾಗದೆ ತಂಡದ ಸದಸ್ಯರು ನೋಡು ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋದರು ಎಂದು ವರದಿಯಾಗಿದೆ. ನೆನ್ನೆಯಿಂದಲೂ ಇವರ ಶವಕ್ಕಾಗಿ ಶೋಧ ಕಾರ್ಯ ನಡೆಸಿದ ಫಲವಾಗಿ ಇಂದು ಶವ ಸಿಕ್ಕಿದ್ದು ವೈದ್ಯಕೀಯ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ನೀಡಲಾಗಿದೆ. ಹಲಗೂರು ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

► Follow us on –  Facebook / Twitter  / Google+

Facebook Comments

Sri Raghav

Admin