ಈಜಿಪ್ಟ್’ನಲ್ಲಿ ಭಯೋತ್ಪಾದಕರ ದಾಳಿಗೆ 8 ಪೊಲೀಸರು ಬಲಿ, ಇಬ್ಬರು ಉಗ್ರರ ಎನ್‍ಕೌಂಟರ್‍

ಈ ಸುದ್ದಿಯನ್ನು ಶೇರ್ ಮಾಡಿ

8-Killed

ಕೈರೊ, ಜ.17-ಭಯೋತ್ಪಾದರ ಗುಂಪೊಂದು ನಡೆಸಿದ ಭೀಕರ ದಾಳಿಯಲ್ಲಿ ಎಂಟು ಪೊಲೀಸರು ಹತರಾಗಿ, ಅನೇಕರು ಗಾಯಗೊಂಡಿರುವ ಘಟನೆ ವಾಯುವ್ಯ ಈಜಿಪ್ಟ್ ನ ಅಲ್-ನಕ್ಬ್ ಭದ್ರತಾ ತಪಾಸಣೆ ಕೇಂದ್ರದಲ್ಲಿ ನಡೆದಿದೆ. ಆ ನಂತರ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರೂ ಹತರಾಗಿದ್ದಾರೆ.  ಖರ್ಗಾ ನಗರದಿಂದ 70 ಕಿ.ಮೀ.ದೂರದಲ್ಲಿರುವ ನ್ಯೂ ವ್ಯಾಲಿ ಗವರ್ನೊರೇಟ್‍ನ ಚೆಕ್‍ಪಾಯಿಂಟ್ ಮೇಲೆ ನಿನ್ನೆ ರಾತ್ರಿ ಆಕ್ರಮಣ ನಡೆಸಿದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿ ಎಂಟು ಪೊಲೀಸರನ್ನು ಹತ್ಯೆ ಮಾಡಿದರು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾದರು ಎಂದು ಗೃಹ ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಳಿ ನಡೆಸಿ ಪರಾರಿಯಾಗಿರುವ ಉಳಿದ ಉಗ್ರರಿಗಾಗಿ ಪೊಲೀಸರು ತೀವ್ರ ಶೋಧ ಮುಂದುವರಿಸಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ ಕೆಲವು ಪೊಲೀಸರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin