ಈಜಿಪ್ಟ್ ಕರಾವಳಿ ಮುಳುಗಿದ ವಲಸಿಗರ ನೌಕೆ : ದುರಂತದಲ್ಲಿ 29 ಮಂದಿ ಜಲಸಮಾಧಿ

ಈ ಸುದ್ದಿಯನ್ನು ಶೇರ್ ಮಾಡಿ

Ezyopt

ಕೈರೋ, ಸೆ.22-ಈಜಿಪ್ಟ್ ಕರಾವಳಿಯಲ್ಲಿ ನಿನ್ನೆ ಅಕ್ರಮ ವಲಸಿಗರ ನೌಕೆಯೊಂದು ಮುಳುಗಿ ಕನಿಷ್ಟ 29 ಮಂದಿ ಮೃತಪಟ್ಟು, ಅನೇಕರು ಕಣ್ಮರೆಯಾಗಿದ್ದಾರೆ. ಈ ದುರಂತದಲ್ಲಿ 150 ಜನರನ್ನು ರಕ್ಷಿಸಲಾಗಿದೆ. ಈಜಿಪ್ಟ್‍ನ ಕಾಫಿರ್-ಅಲ್-ಶೇಕ್ ಕರಾವಳಿಯಲ್ಲಿ 600 ವಲಸಿಗರಿದ್ದ ಅನಧಿಕೃತ ನೌಕೆ ಮುಳುಗಡೆಯಾಯಿತು. ಈ ದುರ್ಘಟನೆಯಲ್ಲಿ ಕನಿಷ್ಟ 29 ಮಂದಿ ನೀರುಪಾಲಾಗಿದ್ದು, ಅನೇಕರು ನಾಪತ್ತೆಯಾಗಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.  ನೌಕೆಯ ಸಾಮಥ್ರ್ಯಕ್ಕಿಂತ ಅತ್ಯಧಿಕ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರಿಂದ ಈ ದುರಂತ ಸಂಭವಿಸಿದೆ. ರಕ್ಷಣಾ ಕಾರ್ಯಕರ್ತರು 150 ಮಂದಿಯನ್ನು ರಕ್ಷಿಸಿದ್ದು, ಕಣ್ಮರೆಯಾದವರಿಗೆ ತೀವ್ರ ಶೋಧ ಮುಂದುವರಿಸಿದ್ದಾರೆ. ನುರಿತ ಈಜುಗಾರರನ್ನು ಸೇವೆಗೆ ಬಳಸಲಾಗಿದೆ.
ಇಷ್ಟು ದೊಡ್ಡ ಸಂಖ್ಯೆಯ ವಲಸಿಗರನ್ನು ಕಾಫಿರ್-ಅಲ್-ಶೇಕ್ ಕರಾವಳಿ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಈವರೆಗೆ ಕಂಡುಬಂದಿಲ್ಲ ಎಂದು ಭದ್ರತಾ ಮೂಲಗಳು ಮತ್ತು ಸ್ಥಳೀಯ ಹೇಳಿಕೆಯನ್ನು ಎಂಇಎನ್‍ಎ ಸುದ್ದಿ ಸಂಸ್ಥೆ ಉಲ್ಲೇಖಿಸಿ ವರದಿ ಮಾಡಿದೆ.

ಈ ಹಡಗಿನಲ್ಲಿ ಈಜಿಪ್ಟ್, ಸಿರಿಯಾ ಮತ್ತು ಆಫ್ರಿಕಾದ ಅಕ್ರಮ ವಲಸಿಗರಿದ್ದರು. ಕಾಫಿರ್-ಅಲ್-ಶೇಕ್ ಕರಾವಳಿ ಪ್ರದೇಶದಲ್ಲಿ ದೋಣಿಗಳಲ್ಲಿ ಅಕ್ರಮ ವಲಸಿಗರನ್ನು ಸಾಗಿಸುವ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿದ್ದು, ದುರಂತಗಳಿಗೂ ಕಾರಣವಾಗುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin