ಈಜಿ ದಡ ಸೇರಲು ಹೋದ ವ್ಯಕ್ತಿ ನೀರು ಪಾಲು
ಕಲಬುರಗಿ, ಆ.30-ಭೀಮಾ ನದಿಯಲ್ಲಿ ಈಜಿ ದಡ ಸೇರಲು ಹೋಗಿದ್ದ ವ್ಯಕ್ತಿಯೊಬ್ಬ ನೀರು ಪಾಲಾಗಿರುವ ಘಟನೆ ಜೇವರ್ಗಿ ತಾಲೂಕಿನ ನರಿಬೋಳದಲ್ಲಿ ಗ್ರಾಮದಲ್ಲಿ ನಡೆದಿದೆ.ನರಿಬೋಳ ಗ್ರಾಮದ ಶ್ರೀಶೈಲ್(40) ನೀರು ಪಾಲಾಗಿರುವ ದುರ್ದೈವಿ.ಈತ ತನ್ನ ಸ್ನೇಹಿತರೊಡನೆ ಚಿತ್ತಾಪುರ ತಾಲೂಕಿನ ವಾಡಿಪಟ್ಟಣಕ್ಕೆ ಹೋಗಿದ್ದ. ಈ ಸಂದರ್ಭದಲ್ಲಿ ಚಾಮನೂರ ಗ್ರಾಮದ ಭೀಮಾ ನದಿ ಹತ್ತಿರ ಇವರೆಲ್ಲ ಬಂದಿದ್ದರು.
ಅಷ್ಟರಲ್ಲಾಗಲೇ ದೋಣಿ ಜನ ತುಂಬಿಸಿಕೊಂಡು ನರಿಬೋಳ ಗ್ರಾಮಕ್ಕೆ ಹೊರಟುಬಿಟ್ಟಿತ್ತು. ದೋಣಿ ವಾಪಸ್ಸಾಗಲು ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಶ್ರೀಶೈಲ್ ನದಿಗೆ ಧುಮುಕಿ ಈಜಿ ದಡ ಸೇರಲು ಯತ್ನಿಸಿದ್ದ. ನೀರಿನ ಸೆಳೆತಕ್ಕೆ ಸಿಕ್ಕಿ ಆತ ಮೃತಪಟ್ಟಿದ್ದಾನೆ. ಆದರೆ ಇದುವರೆಗೆ ಆತನ ಮೃತದೇಹ ಇನ್ನೂ ಪತ್ತೆಯಾಗಿಲ್ಲ.ಅಗ್ನಿಶಾಮಕ ದಳದವರು ನಿರಂತರ ಶೋಧ ನಡೆಸಿದ್ದಾರೆ. ಮೊಸಳೆಗಳು ತಿಂದು ಹಾಕಿರಬಹುದೆಂದು ಶಂಕಿಸಲಾಗಿದೆ. ಜೇವರ್ಗಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
► Follow us on – Facebook / Twitter / Google+