ಈತನನ್ನು ಹುಡುಕಿಕೊಟ್ಟವರಿಗೆ 5ಲಕ್ಷ ಬಹುಮಾನ..!

ಈ ಸುದ್ದಿಯನ್ನು ಶೇರ್ ಮಾಡಿ

missing

ಮೈಸೂರು, ಮೇ 26- ಅಣ್ಣನ ಜತೆ ಜಗಳವಾಡಿ ಮನೆಬಿಟ್ಟು ಹೋಗಿರುವ ಮಗನ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಕೊಡುವುದಾಗಿ ತಂದೆಯೊಬ್ಬರು ಘೋಷಿಸಿದ್ದಾರೆ. ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಹೆಬ್ಬಾಳು ಕೊಪ್ಪಲಿನ ನಾಗೇಶ್(27) ಮನೆ ಬಿಟ್ಟು ಹೋಗಿದ್ದಾನೆ. ನಾಗೇಶ್ ಕಳೆದ ಐದು ವರ್ಷಗಳ ಹಿಂದೆ ತನ್ನ ಅಣ್ಣನೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದ. ಇದುವರೆಗೂ ನೆಂಟರಿಷ್ಟರು, ಸ್ನೇಹಿತರು ಎಲ್ಲರನ್ನು ವಿಚಾರಿಸಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಹಾಗಾಗಿ ತಮ್ಮ ಮಗನ ಬಗ್ಗೆ ಸುಳಿವು ನೀಡಿದಲ್ಲಿ ಅವರಿಗೆ ಐದು ಲಕ್ಷ ರೂ. ಬಹುಮಾನ ನೀಡುವುದಾಗಿ ನಾಗೇಶ್ ತಂದೆ ಶಿವರಾಂ ತಿಳಿಸಿದ್ದಾರೆ.

Facebook Comments

Sri Raghav

Admin