ಈತನ ಸ್ವಾವಲಂಬನೆಯ ಬದುಕಿಗೆ ಅಡ್ಡಿಯಾಗಲಿಲ್ಲ ಅಂಗವೈಕಲ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಅಂಗಾಂಗಗಳೆಲ್ಲವೂ ಚೆನ್ನಾಗಿದ್ದರೂ ದುಡಿಯೋ ಮನಸಿಲ್ಲದವರಿಗೆ ಇಚ್ಚಾಶಕ್ತಿಯ ವಿಕಲತೆಯಿಂದ ಪರಾವಲಂಬಿ,ನಿರುದ್ಯೋಗಿ ಎಂಬ ದಾರಿದ್ರ್ಯತೆಯಲ್ಲಿ ಜೀವಿಸುತ್ತಿರೋರೆ ಜಗತ್ತಿನಲ್ಲಿ ಹೆಚ್ಚು.

ಬಿಟ್ಟಿ ಆದಾಯಕ್ಕಾಗಿ ಪರರಿಗೆ ವಂಚಿಸುವ ಜಾಲದಲ್ಲಿ ಸಿಲುಕಿ ಅದನ್ನೇ ತಮ್ಮ ಮೂಲ ಕಸುಬನ್ನಾಗಿಸಿಕೊಂಡು ಕೊನೆಗೆ ಕಾನೂನು ಕೋಳಕ್ಕೆ ಸಿಲುಕಿ ಒದ್ದಾಡುತ್ತಿದೆ ಬಹುತೇಕ ಯುವಪೀಳಿಗೆ.

ಆದರೆ ಸ್ವಾವಲಂಬನೆಗೆ ದೈಹಿಕ ವಿಕಲೆ ಯಾವುದಕ್ಕೂ ಅಡ್ಡಿಯಾಗಲಾರದೆಂಬುದನ್ನು ಈ ವಿಶೇಷ ಚೇತನ ಕೂಡ್ಲಿಗಿ ಪಟ್ಟಣದ ಯುವಕ ಕೊಟ್ರಬರ್ಮ ಯ್ಯನವರ ಈಶ್ವರ ನಿದರ್ಶನವಾಗಿದ್ದಾನೆ.

ಮಧ್ಯಮ ವರ್ಗವೂ ಅಲ್ಲ ತೀರ ಕೆಳ ವರ್ಗವೂ ಅಲ್ಲದ ಪರಿಶಿಷ್ಟ ವರ್ಗದಲ್ಲಿ ಹುಟ್ಟಿದ್ದು, ಹುಟ್ಟು ಅಂಗವೈಕಲ್ಯನಾದ ಈಶ ಎಸ್‍ಎಸ್‍ಎಲ್‍ಸಿ ಓದಿ ಉದ್ಯೋಗ ಅರಸಿ ತುಂಬಾ ಕಡೆ ಅಲೆದಾಡಿದನಾದರೂ ವಿಕಲಚೇತನನಿಗೆ ಮಾನ್ಯತೆ ದೊರಕದೇ ಸ್ವಲ್ಪದಿನ ಖಿನ್ನತೆಗೊಳಗಾದ ಈಶ್ವರ, ದಿನಗಳನ್ನು ಹಾಗೆ ಕಳೆಯಲೊಪ್ಪದ ಮನಸ್ಸನ್ನು ಭಾರವಾಗಿಸಿಕೊಂಡು ಕಾಲಹರಣ ಮಾಡ ಲಾರದೇ ಪತ್ರಿಕೆಗಳನ್ನ ತಿರುವಿ ಹಾಕುವ ಗೀಳು ಬೆಳೆಸಿಕೊಂಡ.

ಸ್ವಾವಲಂಬಿ ಯೋಜನೆಯಲ್ಲಿ ಯಶಸ್ಸು ಕಂಡವರ ಯಶೋಗಾಥೆಗಳನ್ನು ಪತ್ರಿಕೆಗಳಲ್ಲಿ ಆಸಕ್ತಿಯಿಂದ ಓದುತ್ತಾ ಓದುತ್ತಾ ತಾನೂ ಹೀಗೆ ಸ್ವಯಂ ಉದ್ಯೋಗವಾದ ಗುಡಿ ಕೈಗಾರಿಕೆಯನ್ನು ಚಿಕ್ಕದಾಗಿ ಪ್ರಾರಂಭಿಸಲು ಮುಹೂರ್ತ ಇಟ್ಟುಕೊಂಡ. ಗುಡಿ ಕೈಗಾರಿಕೆ ಆರಂಭಿಸಲು ಸೂಕ್ತ ಯೋಜನೆಯೊಂದನ್ನು ತಾನೇ ನಿರೂಪಿಸಿಕೊಂಡ ಈಶ್ವರ.

ದುಡಿಮೆ ಪ್ರಾರಂಭಿಸಲು ಯೋಗ್ಯ ಬಂಡವಾಳ ಹೂಡಿಕೆ ಇಲ್ಲದ್ದರಿಂದಾಗಿ ಅದಕ್ಕಾಗಿ ಸ್ಥಳೀಯಬ್ಯಾಂಕ್ ಗಳಿಗೆ ಅಲೆದಾಡಿದರೂ ಸಹಕಾರ ದೊರಕಲಿಲ್ಲ, ವಿಕಲಚೇತನರಿಗೆ ಹತ್ತಾರು ಯೋಜನೆಗಳು,ಆರ್ಥಿಕ ನೆರವು ನೀಡುವುದಾಗಿ ಬೇಕಾಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಇಲಾಖೆಗಳು ವಿಕಲಚೇತನರಿಗೆ ಸೂಕ್ತ ಸಮಯಕ್ಕೆ,ಸಮರ್ಪಕವಾಗಿ ಸಹಕಾರ ನೀಡಿರುವ ನಿದರ್ಶನಗಳು ಅಪರೂಪ ಎನ್ನುವುದು ನೊಂದ ಈಶ್ವರವರ ಉವಾಚ.

ತಮ್ಮ ಉದ್ಯೋಗಕ್ಕಾಗಿ ತಾಯಿಯ ಬಳಿ ಇದ್ದ ಒಡವೆಗಳನ್ನು ಗಿರವಿ ಇಟ್ಟು ಬಂದ ಅಲ್ಪ ಸ್ವಲ್ಪ ಹಣಕ್ಕೆ ತನ್ನ ಹಿತೈಷಿಗಳ,ಆತ್ಮೀಯರ ಬಳಿ ಇಂದ ಅಲ್ಪಸ್ವಲ್ಪ ಹಣ ಸಂಗ್ರಹಿಸಿಕೊಂಡು ಬೀಡಿ ಅಂಗಡಿ,ಗೂಡಂಗಡಿಗಳಿಗೆ ಅಗತ್ಯವಿರುವ ಸಂಡಿಗೆ ತಯಾರಿಸಿ ಪ್ಯಾಕೇಟ್ಮಾಡಿ ಹೋಲ್ ಸೇಲ್ ದರದಲ್ಲಿ ಮಾರುವ ವ್ಯಾಪಾರ ಪ್ರಾರಂಭಿಸಿದ ಈಶ್ವರ.

ಈತನೊಂದಿಗೆ ಮನೆಯಲ್ಲಿದ್ದ ತನ್ನ ಸಹೋದರಿ,ತಾಯಿ, ತಂದೆಯರ ಸಹಕಾರ ದೊರಕಿದ್ದ ರಿಂದ ಈತನಿಗೆ ಆನೆಬಲಬಂದಂತಾಯಿತು. ಮೊದ ಮೊದಲು ಕೂಡ್ಲಿಗಿ ಪಟ್ಟಣದ ಗೂಡಂಗಡಿಗಳಿಗೆ ಮಾತ್ರ ಸಂಡಿಗೆ ಪ್ಯಾಕೆಟ್ ಗಳನ್ನು ಹೋಲ್‍ಸೇಲ್ ದರದಲ್ಲಿ ಮಾರುವುದರೊಂದಿಗೆ ಚಿಕ್ಕ ಗುಡಿಕೈಗಾರಿಕೆಗೆ ಚಾಲನೆ ಪಡೆದುಕೊಂಡ ಈಶ್ವರ ಹಂತ ಹಂತವಾಗಿ ತಮ್ಮ ವ್ಯವಹಾರದ ಕ್ಷೇತ್ರವನ್ನು ವಿಸ್ತರಿಸಿಕೊಂಡ, ಬೇಡಿಕೆಗನುಗುಣವಾಗಿ ತರಹವಾರಿ ವಿಧಗಳ ಸಂಡಿಗೆ ತಯಾರಿಸಲು ಪ್ರಾರಂಭಿಸಿದ ಈತನ ಕೂಡ್ಲಿಗಿ ಸಂಡೂರು,ಹಗರಿಬೊಮ್ಮನಹಳ್ಳಿ ತಾಲೂಕಿನ ಬಹುತೇಕ ಗ್ರಾಮಗಳ ಗೂಡಂಗಡಿಗಳಿಗೂ ತಾನೇ ತಮ್ಮ ತ್ರಿಚಕ್ರ ವಾಹನದಲ್ಲಿ ತುಂಬಿಕೊಂಡು ತೆರಳಿ ಮಾರ ಹತ್ತಿದನು,ಈ ಮೂಲಕ ವ್ಯವಹಾರದಲ್ಲಿಟ್ಟ ದಾಪುಗಾಲು ಇಂದು ಜೀವನದ ಆಸರೆಯಾಗಿದೆ.

ಪ್ರಾರಂಭದಲ್ಲಿ ಕೇವಲ ಐದು ಸಾವಿರ ರೂ ಬಂಡವಾಳದೊಂದಿಗೆ ಉದ್ಯಮ ಆರಂಭಿಸಿದ್ದ ಅವರು ಈಗ ದಿನವೊಂದಕ್ಕೆ ಐದಾರು ಸಾವಿರ ರೂಗಳಷ್ಟು ವ್ಯಾಪಾರ ಮಾಡುತ್ತಿದ್ದಾನೆ.

ನಾನ್ನೂರಿಂದ ಐನೂರು ರೂ ನಿವ್ವಳ ಲಾಭ ಗಳಿಸುತ್ತಿದ್ದಾನೆ ಈಶ.ಚಿಕ್ಕ ಕೈಗಾರಿಕೋದ್ಯಮಿಯಾದ ಕೆ.ಬಿ.ಈಶ್ವರ ಅತೀ ಲಾಭದ ದುರಾಸೆಗೆ ಮಾರು ಹೋಗದೇ ತನ್ನೊಡನೆ ವ್ಯವಹರಿಸುವವರ ಮನದಾಳಕ್ಕೆ ಲಗ್ಗೆ ಇಟ್ಟು ಸ್ವಾವಲಂಬಿ ಸ್ವಾಭಿಮಾನಿ ದುಡಿಮೆಸ್ಥ ನೆನೆಸಿಕೊಂಡು ಉಳಿದ ಯುವಕರಿಗೆ ಮಾತ್ರವಲ್ಲ, ವಿಕಲಚೇತನರೆಲ್ಲರಿಗೂ ಮಾದರಿಯಾಗಿದ್ದಾನೆ.

ಬೆಳಗ್ಗೆ ಬೇಗನೇ ಹಳ್ಳಿಗಳಿಗೆ ತಾನು ತಯಾರಿಸಿದ ಸಂಡಿಗೆ ಪ್ಯಾಕೇಟ್‍ಗಳನ್ನು ಸರ್ಕಾರ ಕೊಟ್ಟ ತ್ರಿಚಕ್ರ ವಾಹನದಲ್ಲಿ ಒತ್ತಾಗಿ ಇರಿಸಿಕೊಂಡು ಪಟ್ಟಣದಿಂದ ಪ್ರಾರಂಭಿಸಿ ಮಧ್ಯಾಹ್ನದ ನಡುಬಿಸಿಲೇರುವ ಸಂದರ್ಭಕ್ಕೆ ಬರುವ ಗ್ರಾಮದಲ್ಲಿಯೇ ತಂಗಿ ವಿಶ್ರಮಿಸಿ ಮರಳಿ ತನ್ನ ವ್ಯಾಪಾರ ಶುರುಮಾಡುವ ಈಶ್ವರ ಇಳಿವತ್ತಿನವರೆಗೆ ಇಡುವಿಲ್ಲದೆ ಗೂಡಂಗಡಿಗಳಿಗೆ ಸಮಡಿಗೆ ತಲುಪಿಸಿ ಬಂದ ಹಣದಲ್ಲಿ ಲಾಭಾಂಶ ವಿಂಗಡಿಸಿ,ಬಂಡವಾಳವನ್ನು ಮತ್ತೆ ಹೂಡುವ ಶಿಸ್ಥು ಪರಿಪಾಲಿಸುತ್ತಿದ್ದಾನೆ.

ಪ್ರತಿಯೊಬ್ಬ ವಿಕಚೇತನರಿಗೂ ಚೇತನದಾಯಕವಾಗಿದೆ ಈಶ್ವರನ ಈ ಯಶಸ್ಸು ಎಂದರೆ ಅತಿಶಯೋಕ್ತಿ ಅಲ್ಲ. ಈಶ್ವರನ ವಿಳಾಸ: ಕೆ.ಬಿ.ಈಶ್ವರ,ಸರ್ಕಾರಿ ಪಶುವೈದಕೀಯ ಆಸ್ಪತ್ರೆ ಹತ್ತಿರ, ಹೊಸಪೇಟೆ ರಸ್ತೆ ಕೂಡ್ಲಿಗಿ-583135, ಮೊ 9535700328.

Facebook Comments