ಈರುಳ್ಳಿ, ಆಲೂಗಡ್ಡೆ ಮೂಟೆಗಳ ಮಧ್ಯೆ ಹಣದ ಮೂಟೆಗಳನ್ನಿಟ್ಟು ಕೇರಳಕ್ಕೆ ಸಾಗಿಸುತ್ತಿದ್ದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Crime-Bengaluru

ಬೆಂಗಳೂರು, ಜ.31- ಮಿನಿಗೂಡ್ಸ್ ಲಾರಿಗಳಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆ ಮೂಟೆಗಳ ಮಧ್ಯೆ ಹಣ ತುಂಬಿದ್ದ ಚಿಕ್ಕ ಚಿಕ್ಕ ಮೂಟೆಗಳನ್ನು ಅಡಗಿಸಿ ಕೇರಳಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಮೂರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 4,12,78,300ರೂ. ನಗದು ಹಣ ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್‍ಸೂದ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಿಗೆಹಳ್ಳಿ ಬಳಿಯ ಆನಂದನಗರದ ಮನೆಯೊಂದರಲ್ಲಿ ಕೆಲವು ದಿನಗಳಿಂದ ಕಾನೂನು ಬಾಹೀರ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದ್ದು, ಈ ಆಧಾರದ ಮೇಲೆ ಸಿಸಿಬಿ ಪೊಲೀಸರು ಮನೆ ಮೇಲೆ ದಾಳಿ ಮಾಡಿದ್ದರು.

ದಾಳಿ ವೇಳೆ ಕೇರಳ ಮೂಲದ ಮೊಹಮ್ಮದ್ ಅಬ್ಜಲ್(23), ಅಬ್ದುಲ್ ನಾಜೀರ್(44) ಮತ್ತು ಶಂಸುದ್ದೀನ್(39) ಎಂಬುವರನ್ನು ಬಂಧಿಸಿ 4.12 ಕೋಟಿ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ವಿವರಿಸಿದರು. ದಾಳಿ ವೇಳೆ ಸ್ಥಳದಲ್ಲಿದ್ದ 35 ಮೂಟೆ ಈರುಳ್ಳಿ, 10 ಮೂಟೆ ಆಲೂಗಡ್ಡೆ, ಒಂದು ಟಯೋಟೊ ಕಾರು, ಮಿನಿಗೂಡ್ಸ್ ಲಾರಿ ವಶಪಡಿಸಿಕೊಂಡಿದ್ದಾರೆ.

3-Arrested

ಈ ಮೂವರು ಆರೋಪಿಗಳು ಕೊಡಿಗೆಹಳ್ಳಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ಈರುಳ್ಳಿ ಹಾಗೂ ಆಲೂಗಡ್ಡೆ ಮೂಟೆಗಳನ್ನು ಸಂಗ್ರಹಿಸಿಕೊಂಡು ನಂತರ ಮಿನಿ ಗೂಡ್ಸ್ ಲಾರಿಯಲ್ಲಿ ಹಣವನ್ನು ಸಾಗಿಸಲು ಚಿಕ್ಕ ಚಿಕ್ಕ ಮೂಟೆಗಳಲ್ಲಿ ಹಣ ತುಂಬಿಸುತ್ತಿದ್ದರು. ಹಣಕ್ಕೆ ಯಾವುದೇ ದಾಖಲಾತಿ ನೀಡದ ಕಾರಣ ಈ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪ್ರವೀಣ್‍ಸೂದ್ ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin