ಈವಾರ ತೆರೆ ಮೇಲೆ ಮತ್ತೊಬ್ಬ ಮಾಜಿ ಸಚಿವರ ಪುತ್ರನ ಚಿತ್ರ

ಈ ಸುದ್ದಿಯನ್ನು ಶೇರ್ ಮಾಡಿ

Happu

ಈವಾರ ಮತ್ತೊಬ್ಬ ಮಾಜಿಸಚಿವರ ಪುತ್ರನ ಚಿತ್ರ ಬಿಡುಗಡೆಯಾಗುತ್ತಲಿದೆ. ಮಾಜಿ ಸಚಿವರು ಹಾಗೂ ಶಾಸಕರಾದ ಚೆಲುವರಾಯ ಸ್ವಾಮಿ ಅವರ ಪುತ್ರ ಸಚಿನ್ ಬೆಳ್ಳಿತೆರೆ ಪ್ರವೇಶ ಇಂದಿನಿಂದ ಆರಂಭವಾಗಿದೆ. ಹ್ಯಾಪಿ ಬರ್ತ್ಡೇ ಎಂಬ ಈ ಚಿತ್ರವು ಒಂದಿಲ್ಲೊಂದು ಕಾರಣಗಳಿಂದ ನಿರಂತರವಾಗಿ ಸುದ್ದಿಯಾಗುತ್ತಲಿದೆ. ಈ ಚಿತ್ರದಲ್ಲಿ ಮತ್ತೊಬ್ಬ ಮಾಜಿ ಸಚಿವ ರೆಬೆಲ್ಸ್ಟಾರ್ ಅಂಬರೀಶ್ ಅವರು ಕೂಡ ಅಭಿನಯಿಸಿರುವುದು ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ.   ಕರ್ನಾಟಕ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದಂಥ ಹೆಸರಾಂತ ರಾಜಕಾರಣಿ, ಮಾಜಿಸಚಿವರೂ ಆದ ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್ ನಾಯಕನಾಗಿ ಅಭಿನಯಿಸಿರುವ ಹಾಗೂ ನಿರ್ದೇಶಕ ಮಹೇಶ್ ಸುಖಧರೆ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಹ್ಯಾಪಿ ಬರ್ತ್ಡೇ ಚಿತ್ರ ರಾಜದ್ಯಂತ ತೆರೆಕಾಣುತ್ತಲಿದೆ.

ಈ ಬಗ್ಗೆ ಮೊನ್ನೆ ಕರೆದಿದ್ದ ಪತ್ರಿಕಾಗ್ಟೋಯಲ್ಲಿ ಚಿತ್ರದ ನಿರ್ಮಾಪಕರು ಹಾಗೂ ಶಾಸಕರಾದ ಚೆಲುವರಾಯಸ್ವಾಮಿ, ನಿರ್ದೇಶಕ ಮಹೇಶ್ ಸುಖಧರೆ, ನಾಯಕ ಸಚಿನ್, ನಾಯಕಿ ಸಂಸ್ಕೃತಿ ಶೆಣೈ ಹಾಗೂ ಚಿತ್ರತಂಡ ಹಾಜರಿದ್ದು ಚಿತ್ರದ ಬಗ್ಗೆ ಮಾತನಾಡಿದರು. ತನ್ನ ಮೇಕಿಂಗ್ ಹಾಗೂ ವಿಶೇಷತೆಗಳಿಂದ ಗಾಂಧಿನಗರದಲ್ಲಿ ಅತ್ಯಂತ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟಿಸಿರುವ ಹ್ಯಾಪಿ ಬರ್ತ್ ಡೇ ಚಿತ್ರವನ್ನು ಇತ್ತೀಚೆಗಷ್ಟೇ ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಚಿತ್ರದ ಬಿಡುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಚಿತ್ರ ಎಲ್ಲಾ ಕಡೆ ಇಷ್ಟೊಂದು ಕಾತುರ ಹಾಗೂ ಆತುರವನ್ನು ಉಂಟುಮಾಡಲು ಹಲವಾರು ಕಾರಣಗಳಿವೆ. ಚಿತ್ರದಲ್ಲಿರುವ ಹಲವು ಬಗೆಯ ವಿಶೇಷತೆಗಳಲ್ಲಿ ಪ್ರಮುಖವಾದದ್ದು ಆಕ್ಷನ್. ಭಾರತದ  ಟಾಪ್  ಫೈಟ್ಮಾಸ್ಟರ್ಗಳು ವಿಶೇಷವಾಗಿ 4 ಫೈಟ್ಗಳನ್ನು ಕಂಪೋಜ್ ಮಾಡಿರುವುದೇ ದೊಡ್ಡ ಪ್ಲಸ್ ಎನ್ನುವ ಸುಖಧರೆ, ಈ ಚಿತ್ರದಲ್ಲಿ ದಕ್ಷಿಣ ಭಾರತದ ಬಹುತೇಕ ಸ್ಟಾರ್ಗಳಿಗೆ ಫೈಟ್ ಮಾಡಿಸಿರುವ ರವಿವರ್ಮ, ರಾಮ್ಲಕ್ಷ್ಮಣ್, ಜಲಿ ಬಾಸ್ಟಿನ್ ಹಾಗೂ ಥ್ರಿಲ್ಲರ್ ಮಂಜು ವಿಭಿನ್ನವಾದ ಸಾಹಸ ದೃಷ್ಯಗಳನ್ನು ಸಂಯೋಜಿಸಿದ್ದಾರೆ.

ಟ್ರೈಲರ್

ಪ್ರತಿಯೊಂದು ಫೈಟ್ ಹೊಸತನದಿಂದ ಕೂಡಿದೆ. ಹಾಗಂತ ಇದು ಬರೀ ಆಕ್ಷನ್ ಚಿತ್ರವಷ್ಟೇ ಅಲ್ಲ, ಮಂಡ್ಯ ಮಣ್ಣಿನ ಮಗನ ಒಂದು ಕ್ಯೂಟ್ ಆದಂತಹ ಲವ್ಸ್ಟೋರಿ ಕೂಡ ಈ ಚಿತ್ರದಲ್ಲಿದೆ. ಈ ಸಿನಿಮಾ ನೋಡಿದವರಿಗೆ ಸಾಹಸ ದೃಷ್ಯಗಳು ಖಂಡಿತ ನೆನಪಲ್ಲಿ ಕಾಡುತ್ತವೆ ಎಂದು ಹೇಳುವ ಮಹೇಶ್ ಸುಖಧರೆ, ಇಲ್ಲಿ ಬರೀ ಸಾಹಸಕ್ಕಷ್ಟೇ ಒತ್ತು ನೀಡದೆ, ಹೃದಯ ಕಲಕುವಂಥ ಫ್ಯಾಮಿಲಿ ಡಾ ಮಾ ದೃಷ್ಯಗಳಿಗೂ ಹೆಚ್ಚಿನ ಮಹತ್ವ ನೀಡಿರುವುದಾಗಿ ಹೇಳುತ್ತಾರೆ. ಕನ್ನಡ ಚಿತ್ರರಂಗದ ರಿಯ ನಟ, ಮಂಡ್ಯದ ಗಂಡು ರೆಬೆಲ್ಸ್ಟಾರ್ ಅಂಬರೀಶ್ ಅವರು ಈ ಚಿತ್ರದಲ್ಲಿ ಬಹುಮುಖ್ಯವಾದ ಪಾತ್ರವೊಂದನ್ನು ನಿರ್ವಹಿಸಿದ್ದು ಇಡೀ ಚಿತ್ರಕಥೆಯಲ್ಲಿ ಅವರ ಪಾತ್ರವೇ ಕೇಂದ್ರಬಿಂದುವಾಗಿ ನಿಲ್ಲಲಿದೆ ಎಂದು ಕೂಡ ನಿರ್ದೇಶಕರಾದ ಮಹೇಶ್ ಸುಖಧರೆ ಅವರು ಹೇಳುತ್ತಾರೆ. ಇದಲ್ಲದೆ ಹ್ಯಾಪಿ ಬರ್ತ್ ಡೇ ಚಿತ್ರದಲ್ಲಿ ಕ್ಷಕರಿಗೆ ಆಶ್ಚರ್ಯ ಉಂಟುಮಾಡು ವಂಥ ಮತ್ತೊಂದು ಪಾತ್ರವಿದೆ. ಅದೇ ನಟ ಶ್ರೀನಗರ ಕಿಟ್ಟಿ ಅವರು ನಿರ್ವಹಿಸಿದಂಥ ಪಾತ್ರ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರೂ ಕೂಡ ಒಂದು ಭಾಗವಾಗಿ ಬಂದು ವೀಕ್ಷಕರನ್ನು ರಂಜಿಸಲಿದ್ದಾರೆ. ಇನ್ನು ಕೇರಳದ ಬೆಡಗಿ ಸಂಸ್ಕೃತಿ ಶೆಣೈ ನಾಯಕನ ಜೊತೆಗಾತಿಯಾಗಿ ಚಿತ್ರಕ್ಕೆ ಮೆರಗು ತುಂಬಿದ್ದಾರೆ. ಇದೇ ಸಂದರ್ಭದಲ್ಲಿ ನಟ ಬುಲೆಟ್ ಪ್ರಕಾಶ್, ವಿತರಕ ಜಾಕಿ ಮಂಜು ಹಾಜರಿದ್ದರು. ಈ ಚ್ರಿ ಸುಮಾರು 200 ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಆರ್ಭಟಿಸಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin