ಈ ವಾರ ಸಿಲ್ವರ್ ಸ್ಕ್ರೀನ್‍ನಲ್ಲಿ ‘ಸಿಪಾಯಿ’

ಈ ಸುದ್ದಿಯನ್ನು ಶೇರ್ ಮಾಡಿ

sipayi

ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರ ಅಭಿನಯದಲ್ಲಿ 2 ದಶಕಗಳ ಹಿಂದೆ ತೆರೆಕಂಡು ಭರ್ಜರಿ ಪ್ರದರ್ಶನ ಕಂಡು ದಾಖಲೆ ಮಾಡಿದಂತಹ ಚಿತ್ರ ಸಿಪಾಯಿ. ಆ ಚಿತ್ರ ಬಿಡುಗಡೆಯಾಗಿ ಸರಿಸುಮಾರು ಎರಡು ದಶಕಗಳೇ ಕಳೆದಿದ್ದರೂ ಚಿತ್ರದ ಹಾಡುಗಳು ಮಾತ್ರ ಇಂದಿಗೂ ಸಿನಿಪ್ರಿಯರ ಬಾಯಲ್ಲಿ ಸದಾ ಗುನುಗುಡುತ್ತಿವೆ. ಅಂತಹ ಸೂಪರ್ ಹಿಟ್ ಚಿತ್ರದ ಶೀರ್ಷಿಕೆಯಲ್ಲಿ ನಿರ್ಮಾಣವಾಗಿರುವ ಮತ್ತೊಂದು ಚಿತ್ರ ಈವಾರ ರಾಜ್ಯಾಧ್ಯಂತ ತೆರೆಗೆ ಬರುತ್ತಿದೆ.  ನಿರ್ದೇಶಕ ಯೋಗರಾಜ್ ಭಟ್ ಅವರ ಬಳಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ, ಲೂಸಿಯಾ ಸಿನಿಮಾಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಜತ್ ಮಯಿ, ಈ ಸಿಪಾಯಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಸಿದ್ದಾರ್ಥ್ ಮಹೇಶ್ ಎಂಬ ನವನಾಯಕ ನಟ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಎಂಟ್ರಿಯಾಗುತ್ತಿದ್ದಾರೆ. ಒಬ್ಬ ಪತ್ರಕರ್ತ ಸಮಾಜದ ಒಳಗಿರುವ ದುಷ್ಟಶಕ್ತಿಗಳನ್ನು ದಮನ ಮಾಡಲು ಹೋರಾಡುವ ಕಥಾನಕವನ್ನು ಈ ಚಿತ್ರದಲ್ಲಿ ನಿರೂಪಿಸಲಾಗಿದೆ. ಲೂಸಿಯಾ ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕ ಪ್ರತಿಭೆಗಳು ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಸಿಪಾಯಿ ಚಿತ್ರದಲ್ಲಿ ನಟ ಸಿದ್ದಾರ್ಥ್ ಮಹೇಶ್ ಅವರಿಗೆ ನಾಯಕಿಯಾಗಿ ಲೂಸಿಯಾ ಬೆಡಗಿ ಶೃತಿ ಹರಿಹರನ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ್‍ಕುಮಾರ್, ಸಂಚಾರಿ ವಿಜಯ್, ಉಗ್ರಂ ಮಂಜು ಸೇರಿದಂತೆ ಹಲವಾರು ಹಿರಿಯ ಹಾಗೂ ಕಿರಿಯ ಕಲಾವಿದರ ತಾರಾಗಣ ಈ ಚಿತ್ರದಲ್ಲಿದೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತವಿದ್ದು, ಅಕ್ಷಯ್.ಪಿ.ರಾವ್ ಅವರ ಸಂಕಲನ ಕಾರ್ಯವಿದೆ. ಈ ಚಿತ್ರದ ಹಾಡುಗಳ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿಬಂದಿದೆ. ಚಿತ್ರದ ಟೀಸರ್‍ಗಳು ಈಗಾಗಲೆ ಸಾಮಾಜಿಕ ಜಲತಾಣಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ.

 

► Follow us on –  Facebook / Twitter  / Google+

Facebook Comments

Sri Raghav

Admin