ಈಶಾನ್ಯ ಭಾರತದ ಕೆಲವೆಡೆ ವರುಣನ ರುಧ್ರನರ್ತನ, ಸಾವು-ನೋವು

ಈ ಸುದ್ದಿಯನ್ನು ಶೇರ್ ಮಾಡಿ

Rain--001

ಐಜ್ವಾಲ್/ಗುವಾಹಟಿ, ಜೂ.14-ಈಶಾನ್ಯ ಭಾರತದ ಮಿಜೋರಾಂ ಮತ್ತು ಅಸ್ಸಾಂನಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ 18ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಹಲವರು ನಾಪತ್ತೆಯಾಗಿದ್ದಾರೆ. ನೆರೆ ಹಾವಳಿಯಿಂದಾಗಿ ನೂರಾರು ಮನೆಗಳು ಮುಳುಗಡೆಯಾಗಿದ್ದು, ಸಹಸ್ರಾರು ಮಂದಿ ಸಂತ್ರಸ್ತರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದಿಂದ ಸಂಪರ್ಕ ಕಡಿತಗೊಂಡಿದೆ. ಮಿಜೋರಾಂನ ಲುಂಗ್ಲಿ ಜಿಲ್ಲೆಯ ಟ್ಲಾಬುಂಗ್‍ನಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ 18 ಮಂದಿ ಮೃತಪಟ್ಟು, 16ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಸುಮಾರು 400 ಮನೆಗಳು ಮಳೆಯಲ್ಲಿ ಮುಳುಗಡೆಯಾಗಿವೆ.


ಅಸ್ಸಾಂನ ಕೆಲವೆಡೆ ಧಾರಾಕಾರ ಮಳೆ ಮತ್ತು ನೆರೆಯಿಂದ ಸಾವು-ನೋವು ಸಂಭವಿಸಿದೆ. ಕೆಲವರು ಕಣ್ಮರೆಯಾಗಿದ್ದಾರೆ. ಮಿಜೋರಾಂನೊಂದಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-54ರ ಹಲವೆಡೆ ಭೂಕುಸಿತ ಉಂಟಾಗಿದ್ದು, ಸಂಪರ್ಕಕ್ಕೆ ಧಕ್ಕೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin