ಈಶ್ವರಪ್ಪ ‘ಹಿಂದ’ಗೆ ಮೋರ್ಚಾ ಮೂಲಕ ಟಾಂಗ್ ಕೊಡಲು ಮುಂದಾದ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Eshwarapa

ಬೆಂಗಳೂರು, ಆ.27-ಬಿಜೆಪಿ ರಾಜಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ನಡುವಿನ ಅಸಮಾಧಾನ ಶಮನಕ್ಕೆ ಪಕ್ಷದ ಹೈಕಮಾಂಡ್ ತಲೆಕೆಡಿಸಿಕೊಂಡಿದೆ. ಆದರೆ ಇನ್ನೊಂದೆಡೆ ಯಡಿಯೂರಪ್ಪನವರು ಈಶ್ವರಪ್ಪಗೆ ಟಾಂಗ್ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.  ಪಕ್ಷದ ವರಿಷ್ಠರು ರಾಜ್ಯದ ಇಬ್ಬರು ಪ್ರಭಾವಿ ಸಮುದಾಯದ ನಾಯಕರ ನಡುವಿನ ವೈಮನಸ್ಸನ್ನು ಮಾತುಕತೆ ಮೂಲಕ ಬಗೆಹರಿಸುವ ಯತ್ನದಲ್ಲಿದ್ದಾರೆ. ಆದರೆ ಇನ್ನೊಂದೆಡೆ ಈಶ್ವರಪ್ಪ ‘ಹಿಂದ’ಗೆ ಟಾಂಗ್ ಕೊಡಲು ಮುಂದಾಗಿರುವ ಯಡಿಯೂರಪ್ಪ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದಿಂದ ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬಿಎಸ್ವೈ ಈಗಾಗಲೇ ಸಮಾವೇಶದ ರೂಪುರೇಷೆ ಸಿದ್ಧಪಡಿಸುವ ಕುರಿತು ಚರ್ಚಿಸಲು ಆ. 30 ರಂದು ಸಭೆ ಕೂಡ ಕರೆದಿದ್ದಾರೆ. ಮಾಜಿ ಸಚಿವ ಹಾಗೂ ಹಿಂದುಳಿದ ಮೋರ್ಚಾ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಜತೆ ಈ ವಿಚಾರವಾಗಿ ಒಂದೆರಡು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಿಂದ ತಂತ್ರದ ಮೂಲಕ ಈಶ್ವರಪ್ಪ ಪಕ್ಷದಲ್ಲಿ ತಮ್ಮ ಬಲ ತೋರಿಸಲು ಸಿದ್ಧತೆ ನಡೆಸುತ್ತಿದ್ದರೆ, ಅದಕ್ಕೆ ಬಿಎಸ್ವೈ ಈ ಪ್ರತಿತಂತ್ರ ಹೆಣೆದಿದ್ದಾರೆ. ಒಂದೆಡೆ ಹೈಕಮಾಂಡ್ ಅಸಮಾಧಾನ ಶಮನಕ್ಕೆ ಯತ್ನಿಸುತ್ತಿದೆ. ಇನ್ನೊಂದೆಡೆ ಹಾವೇರಿಯಲ್ಲಿ ಹಿಂದ ಸಮಾವೇಶದ ಪೂರ್ವಭಾವಿ ಸಭೆ ಇಂದು ನಡೆದಿದ್ದು, ಅಲ್ಲಿ ಈಶ್ವರಪ್ಪ ಪಾಲ್ಗೊಂಡಿದ್ದಾರೆ. ಮತ್ತೊಂದೆಡೆ ಬಿಎಸ್ವೈ ಮೋರ್ಚಾ ಅಡಿ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದಾರೆ.

ಮೂರು ಮೋರ್ಚಾಗಳು ಒಂದೆಡೆ ಬಿ.ಎಸ್. ಯಡಿಯೂರಪ್ಪ ನಡೆ ಚಿಕ್ಕದಾಗೇನೂ ಇಲ್ಲ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮೂರು ಮೋರ್ಚಾಗಳನ್ನು ಒಗ್ಗೂಡಿಸಿ ಒಂದೆಡೆ ಸೇರಿಸಿ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಪಕ್ಷದ ವಿವಿಧ ಮೋರ್ಚಾಗಳನ್ನು ಒಂದೆಡೆ ಸೇರಿಸಿ ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಒಂದು ಬೃಹತ್ ಸಮಾವೇಶ ರಾಜ್ಯದ ರಾಜಧಾನಿಯಲ್ಲಿ ನಡೆದರೆ, ನಂತರದ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೂಡ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin