ಈ ಗ್ರಾಮದಲ್ಲಿ ಇನ್ನೂ ಜಾರಿಯಲ್ಲಿದೆ ಮಕ್ಕಳನ್ನು 15 ಅಡಿ ಎತ್ತರದಿಂದ ಎಸೆಯುವ ವಿಚಿತ್ರ ಪದ್ಧತಿ..!

ಈ ಸುದ್ದಿಯನ್ನು ಶೇರ್ ಮಾಡಿ

Babyb--01
ಬೆಳಗಾವಿ,ಮಾ.20-ಪುಟ್ಟ ಮಕ್ಕಳನ್ನು 15 ಅಡಿ ಎತ್ತರದಿಂದ ಎಸೆಯುವ ಮೌಢ್ಯ ಪದ್ಧತಿಯೊಂದು ಜಿಲ್ಲೆಯ ಹುಲಬಾಳ ದೇಗುಲದಲ್ಲಿ ಜಾರಿಯಲ್ಲಿದೆ. ಕೌಟುಂಬಿಕ ಸೌಖ್ಯಕ್ಕಾಗಿ ಇಂಥದ್ದೊಂದು ಅಪಾಯಕಾರಿ ಪದ್ಧತಿ ಇಂದಿಗೂ ನಡೆದುಕೊಂಡು ಬರುತ್ತಿದ್ದು ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಥಣಿಯ ಹುಲಬಾಳ ಗ್ರಾಮದಲ್ಲಿ ದೇವಸ್ಥಾನವೊಂದರ ಪೂಜಾರಿ 10ಕ್ಕೂ ಹೆಚ್ಚು ಮಕ್ಕಳನ್ನು ದೇವಸ್ಥಾನದ ಮೇಲಿನಿಂದ ಎಸೆದಿದ್ದಾರೆ. ಹೀಗೆ ಮಕ್ಕಳನ್ನು ಮೇಲಿಂದ ಎಸೆದರೆ ಗಂಡು ಮಗು ಜನನವಾಗುತ್ತದೆ ಎಂಬುದು ಇಲ್ಲಿನವರ ಮೂಢನಂಬಿಕೆಯಾಗಿದೆ. ಪ್ರತಿ ಯುಗಾದಿ ಮಾರನೆ ದಿನ ಇಂಥ ಅಪಾಯಕಾರಿ ಆಚರಣೆ ನಡೆಯುತ್ತಿದೆ. ಇನ್ನು ಈ ಘಟನೆ ನಡೆದು ಒಂದು ದಿನವೇ ಕಳೆದಿದ್ದರೂ ತಾಲೂಕು ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾಡಳಿತವೂ ಸಹ ಮೌನವಾಗಿದ್ದು ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin