ಈ ತಡೆಗೋಡೆ ತೆರವುಗೊಳಿಸಿದರೆ ಸಾಕು ಸ್ಟೀಲ್ ಬ್ರಿಡ್ಜ್’ನ ಅನಿವಾರ್ಯತೆಯೇ ಇರುವುದಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

s3
ಈ ರಸ್ತೆಯಲ್ಲಿ ಸಾಗಿದರೆ ಒಂದು ತಾಸಿನಲ್ಲಿ ವಿಮಾನ ನಿಲ್ದಾಣದ ತಡೆಗೋಡೆ ಇರುವ ಮೈಲೇನಹಳ್ಳಿ ತಲುಪಬಹುದು. ಇಲ್ಲಿಂದ ನಿಲ್ದಾಣಕ್ಕೆ ಹೋಗಬೇಕಾದರೆ ಇರುವ ಅಡೆತಡೆಯೆಂದರೆ ತಡೆಗೋಡೆಯೊಂದೇ. ಈ ಗೋಡೆಯನ್ನು ತೆರವುಗೊಳಿಸಿದರೆ ಸಾಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶ ಪಡೆಯಬಹುದು.

ಬೆಂಗಳೂರು, ಅ.26- ಕೇವಲ ಒಂದು ತಡೆಗೋಡೆ ತೆರವುಗೊಳಿಸಿದರೆ ಸಾಕು ಸಾವಿರಾರು ಕೋಟಿ ರೂ.ಗಳ ಉಳಿತಾಯವಾಗುತ್ತದೆ. ಇಂತಹ ಸಣ್ಣ ವಿಷಯ ಸರ್ಕಾರದ ಗಮನಕ್ಕೆ ಬಾರದಿರುವುದು ಮಾತ್ರ ವಿಪರ್ಯಾಸ.

ಏನಿದು ತಡೆಗೋಡೆ….?

ಇದನ್ನು ತೆರವುಗೊಳಿಸಿದರೆ ಅದು ಹೇಗೆ ಸಾವಿರಾರು ಕೋಟಿ ರೂ. ಉಳಿತಾಯವಾಗಲಿದೆ ಎಂದು ತಲೆ ಕೆಡಿಸಿಕೊಂಡಿದ್ದೀರಾ?ಇದು ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯಲ್ಲಿ ಸಾಗಿದರೆ ಅಂತಿಮವಾಗಿ ಸಿಗುವುದೇ ಈ ತಡೆಗೋಡೆ. ಈ ಗೋಡೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಲ್ಪಿಸಿರುವ ಗೋಡೆಯಾಗಿದೆ. ಕೇವಲ ಈ ತಡೆಗೋಡೆಯೊಂದನ್ನು ತೆರವುಗೊಳಿಸಿದರೆ ಸಾಕು ಸಾವಿರಾರು ಕೋಟಿ ರೂ. ಖರ್ಚು ಮಾಡಿ ಉಕ್ಕಿನ ಸೇತುವೆ ನಿರ್ಮಿಸುವುದು ಬೇಡ, ಮತ್ಯಾವ ಖರ್ಚು ಮಾಡಿ ಪರ್ಯಾಯ ವ್ಯವಸ್ಥೆ ಮಾಡುವುದೂ ಬೇಡ.

s2
ಸರ್ಕಾರಕ್ಕೆ ಈ ವಿಷಯ ತಿಳಿದಿದ್ದರೂ ಸುಖಾಸುಮ್ಮಾನೆ ಎರಡುಸಾವಿರ ಕೋಟಿ ರೂ. ಖರ್ಚು ಮಾಡಿ ಉಕ್ಕಿನ ಸೇತುವೆ ನಿರ್ಮಿಸಲು ಮುಂದಾಗಿರುವುದು ಹಾಸ್ಯಸ್ಪದವಾಗಿ ಕಂಡರೂ ಇದರ ಹಿಂದೆ ಬೇರೆಯಾವುದೋ ದುರುದ್ದೇಶವಿದೆ ಎಂಬ ಅನುಮಾನ ಕಾಡದಿರದು.  ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಬಳ್ಳಾರಿ ರಸ್ತೆಯನ್ನು ಸಿಗ್ನಲ್‍ಫ್ರೀ ಮಾಡಿದರೂ ಪ್ರತಿನಿತ್ಯ ಸಂಚರಿಸುವ ಸಾವಿರಾರು ವಾಹನಗಳಿಂದಾಗಿ ವಾಹನ ದಟ್ಟಣೆ ಹೆಚ್ಚಾಗುತ್ತಲೇ ಇದೆ.ಈ ವಾಹನ ದಟ್ಟಣೆ ತಪ್ಪಿಸಬೇಕು ಎಂಬ ಉದ್ದೇಶದಿಂದಲೇ ಸರ್ಕಾರ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೂ ಉಕ್ಕಿನ ಮೇಲ್ಸೇತುವೆ ನಿರ್ಮಿಸುವ ತೀರ್ಮಾನಕ್ಕೆ ಬಂದಿದೆ. ಈ ಯೋಜನೆಗೆ ಸಾರ್ವಜನಿಕರು ಹಾಗೂ ಪ್ರತಿಪಕ್ಷದವರು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದರೂ ಸರ್ಕಾರ ಮಾತ್ರ ತನ್ನ ಮೊಂಡು ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ.

ವಿಮಾನ ನಿಲ್ದಾಣಕ್ಕೆ ತೆರಳಲು ಕೆ.ಆರ್.ಪುರ, ಹೊಸೂರು ರಸ್ತೆ ಮುಂತಾದ ಕಡೆಗಳಿಂದ ಬರುವ ವಾಹನಗಳು ಇದೇ ಬಳ್ಳಾರಿ ರಸ್ತೆಯಿಂದಲೇ ತೆರಳಬೇಕಾಗಿರುವುದರಿಂದ ಈ ರಸ್ತೆ ಸದಾ ವಾಹನ ಜಂಗುಳಿಯಿಂದ ತುಂಬಿ ಹೋಗುತ್ತಿದೆ. ಈ ವಾಹನ ದಟ್ಟಣೆ ತಪ್ಪಿಸಲು ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯನ್ನು ಬಳಕೆ ಮಾಡಿಕೊಂಡರೆ ಬಹುತೇಕ ಸಮಸ್ಯೆಗೆ ಪರಿಹಾರ ದೊರೆತಂತೆ. ಆದರೆ, ಸರ್ಕಾರ ಮಾತ್ರ ಈ ಪರ್ಯಾಯ ಮಾರ್ಗದ ಬಗ್ಗೆ ಚಿಂತನೆ ನಡೆಸುತ್ತಿಲ್ಲ.ನಾಗವಾರ ರಿಂಗ್ ರಸ್ತೆಯಿಂದ ಆರಂಭವಾಗುವ ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯನ್ನು ಬಿಬಿಎಂಪಿ ಈಗಾಗಲೇ ಸಮಗ್ರವಾಗಿ ಅಭಿವೃದ್ಧಿಪಡಿಸಿದೆ. ಈ ರಸ್ತೆ ನಿರ್ಮಾಣಕ್ಕಾಗಿ 110 ಎಕರೆ ಪ್ರದೇಶವನ್ನು ಭೂ ಸ್ವಾಧೀನ ಪಡಿಸಿಕೊಂಡು 350 ಕೋಟಿ ರೂ.ಗಳ ಟಿಡಿಆರ್ ಮೂಲಕ ಪರಿಹಾರವನ್ನೂ ನೀಡಿದೆ. ಮಾತ್ರವಲ್ಲ 70 ಕೋಟಿ ರೂ. ವೆಚ್ಚದಲ್ಲಿ ಅದ್ಭುತವಾದ ರಸ್ತೆಯನ್ನು ನಿರ್ಮಾಣ ಮಾಡಿದೆ.

ಈ ರಸ್ತೆಯಲ್ಲಿ ಸಾಗಿದರೆ ಒಂದು ತಾಸಿನಲ್ಲಿ ವಿಮಾನ ನಿಲ್ದಾಣದ ತಡೆಗೋಡೆ ಇರುವ ಮೈಲೇನಹಳ್ಳಿ ತಲುಪಬಹುದು. ಇಲ್ಲಿಂದ ನಿಲ್ದಾಣಕ್ಕೆ ಹೋಗಬೇಕಾದರೆ ಇರುವ ಅಡೆತಡೆಯೆಂದರೆ ತಡೆಗೋಡೆಯೊಂದೇ. ಈ ಗೋಡೆಯನ್ನು ತೆರವುಗೊಳಿಸಿದರೆ ಸಾಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶ ಪಡೆಯಬಹುದು.ಈ ತಡೆಗೋಡೆ ತೆರವುಗೊಳಿಸಲು ನಿಲ್ದಾಣದೊಳಗೆ ಟರ್ಮಿನಲ್ ನಿರ್ಮಿಸುತ್ತಿರುವುದರಿಂದ ಸಾಧ್ಯವಾಗುತ್ತಿಲ್ಲ ಎಂಬ ಸಬೂಬು ಹೇಳಲಾಗುತ್ತಿದೆ. ಈ ಸಬೂಬಿಗೆ ಯಾವುದೇ ಅರ್ಥವಿಲ್ಲ ಎಂಬುದು ಕನಿಷ್ಠ ಜ್ಞಾನ ಹೊಂದಿರು ವವರಿಗೂ ಅರ್ಥವಾಗುತ್ತದೆ. ಆದರೆ, ಸರ್ಕಾರಕ್ಕೆ ಮಾತ್ರ ಅರ್ಥವಾಗುತ್ತಿಲ್ಲ.ಟರ್ಮಿನಲ್ ನಿರ್ಮಿಸಿದರೂ ತಡೆಗೋಡೆ ತೆರವುಗೊಳಿಸಿ ಸುರಂಗ ಮಾರ್ಗ ನಿರ್ಮಿಸಿದರೆ ಸಾಕು ವಿಮಾನ ನಿಲ್ದಾಣಕ್ಕೂ ಮುನ್ನ ಸಿಗುವ ಎರಡನೇ ಸರ್ಕಲ್‍ಗೆ ನೇರ ಪ್ರವೇಶ ಪಡೆಯಬಹುದು. ಒಂದು ವೇಳೆ ಟರ್ಮಿನಲ್ ಕಾರಣದಿಂದ ತಡೆಗೋಡೆ ತೆರವುಗೊಳಿಸಲು ಸಾಧ್ಯವೇ ಇಲ್ಲ ಎಂದಾದರೂ ತಡೆಗೋಡೆ ಸಮೀಪ ಎಡ ಬದಿಯಲ್ಲಿ ಕೇವಲ ಮೂರ್ನಾಲ್ಕು ಕಿ.ಮೀ. ರಸ್ತೆ ನಿರ್ಮಿಸಿದರೂ ನೇರವಾಗಿ ನಿಲ್ದಾಣ ತಲುಪಬಹುದು.

s4
ಏಕೆ ಈ ದೊಂಬರಾಟ…:

ಇಷ್ಟೆಲ್ಲಾ ಅವಕಾಶವಿದ್ದರೂ ಸರ್ಕಾರ ಮಾತ್ರ ಇದನ್ನು ಬಳಕೆ ಮಾಡಿಕೊಳ್ಳದೆ ಉಕ್ಕಿನ ಸೇತುವೆ ನಿರ್ಮಿಸುವ ಮೊಂಡು ಹಠಕ್ಕೆ ಬಿದ್ದಿರುವುದಾದರೂ ಏಕೆ ಎಂಬ ಪ್ರಶ್ನೆ ಕಾಡುವುದು ಸಹಜ.ಇಲ್ಲೇ ಇರೋದು ಟ್ವಿಸ್ಟ್… ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ವಾಹನಗಳಿಂದ ಟೋಲ್ ಸಂಗ್ರಹಿಸುವ ಹೊಣೆಯನ್ನು ನವಯುಗ ಟೋಲ್ ಸಂಸ್ಥೆಯವರು ವಹಿಸಿಕೊಂಡಿದ್ದಾರೆ. ಒಂದು ಅಂದಾಜಿನ ಪ್ರಕಾರ ಈ ಟೋಲ್ ಸಂಸ್ಥೆಯವರು ದಿನನಿತ್ಯ ಲಕ್ಷಾಂತರ ರೂ. ಹಣ ಸಂಗ್ರಹಿಸುತ್ತಿದ್ದಾರೆ.ನಿಲ್ದಾಣಕ್ಕೆ ತಲುಪುವ ವಾಹನ ಸವಾರರು ನವಯುಗ ಟೋಲ್‍ನವರು ನಿಗದಿಪಡಿಸಿರುವ ಟೋಲ್ ಹಣ ತೆತ್ತು ತೆರಳುವುದು ಅನಿವಾರ್ಯ. ಇದನ್ನೇ ಬಂಡವಾಳ ಮಾಡಿಕೊಂಡಿರುವ ನವಯುಗ ಸಂಸ್ಥೆಯವರು ಪದೇ ಪದೇ ಟೋಲ್ ದರವನ್ನು ಏರಿಸುತ್ತಿರುತ್ತಾರೆ. ಇದೂ ಕೂಡ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

s1
ಸಾರ್ವಜನಿಕರಿಂದ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿರುವ ನವಯುಗ ಸಂಸ್ಥೆಯವರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದಲೇ ಸರ್ಕಾರ ಅಂದಾಜು 500 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹೆಣ್ಣೂರು-ಬಾಗಲೂರು ರಸ್ತೆಯನ್ನು ಮುಕ್ತಗೊಳಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.ಒಂದು ವೇಳೆ ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯ ತಡೆಗೋಡೆಯನ್ನು ತೆರವುಗೊಳಿಸಿದರೆ ಆ ಮಾರ್ಗದಲ್ಲೇ ಹೆಚ್ಚು ವಾಹನಗಳು ಸಂಚರಿಸುವುದರಿಂದ ಬಳ್ಳಾರಿ ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಟೋಲ್ ಸಂಗ್ರಹಿಸುವ ನವಯುಗ ಸಂಸ್ಥೆಯವರಿಗೆ ನಷ್ಟ ಸಂಭವಿಸುತ್ತದೆ. ಇದಕ್ಕಾಗೇ ಸರ್ಕಾರ ಹೆಣ್ಣೂರು- ಬಾಗಲೂರು ರಸ್ತೆಯನ್ನು ಮುಕ್ತಗೊಳಿಸದೆ ಕೇವಲ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೂ ಉಕ್ಕಿನ ಮೇಲ್ಸೇತುವೆ ನಿರ್ಮಿಸಿ ನವಯುಗ ಸಂಸ್ಥೆಗೆ ಅನುಕೂಲ ಮಾಡಿ ಕೊಡುವ ಉದ್ದೇಶ ಹೊಂದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

 

► Follow us on –  Facebook / Twitter  / Google+

Facebook Comments

Sri Raghav

Admin