ಎಚ್ಚರಿಕೆ..: ಈ ನಾಲ್ಕು ಆಪ್’ಗಳು ನಿಮ್ಮ ಮೊಬೈಲ್’ನಲ್ಲಿದ್ದರೆ ಈ ಕ್ಷಣದಲ್ಲೇ ಡಿಲೀಟ್ ಮಾಡಿಬಿಡಿ..!

ಈ ಸುದ್ದಿಯನ್ನು ಶೇರ್ ಮಾಡಿ

Smart-phone

ನವದೆಹಲಿ ಡಿ. 15 : ಸ್ಮಾರ್ಟ್ ಪೋನ್ ಗಳು ಬಂದಮೇಲೆ, ಜೊತೆಜೊತೆಗೆ ನಾನಾ ಸ್ಮಾರ್ಟ್ ಸಮಸ್ಯೆಗಳು ಎದುರಾಗುತ್ತಿವೆ.  ಸಾಮಾನ್ಯವಾಗಿ ಅವಶ್ಯಕತೆಗಿಂತ ಹೆಚ್ಚು ಆಪ್ಸ್ ಗಳನ್ನು ನಿಮ್ಮ ಮೊಬೈಲ್ ನಲ್ಲಿ ನೀವು ಇನ್ಸ್ಟಾಲ್ ಮಾಡಿಕೊಂಡಿರುತ್ತೀರಿ, ಆದರೆ ಆಪ್ ಗಳು ಎಷ್ಟು ಸೇಫ್ ಎನ್ನು ಪ್ರಶ್ನೆ ಕಾಡುತ್ತದೆ. ಇದಕ್ಕೆ ಪೂರಕವಾಗಿ ಈ ಕೆಳಗಿನ ನಾಲ್ಕು ಅಪಾಯಕಾರಿ ಆಪ್ ಗಳು ನಿಮ್ಮ ಮೊಬೈಲ್ ನಲ್ಲಿ ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಡೌನ್ ಲೋಡ್ ಆಗಿದ್ದರೆ ಹುಷಾರ್..! ಮೊಬೈಲ್ನಲ್ಲಿ ಕೆಲವು ಆಪ್’ಗಳ ಮೂಲಕ ಹ್ಯಾಕರ್ಸ್’ಗಳು ನಿಮ್ಮ ಖಾತೆಯ ಮಾಹಿತಿಗಳನ್ನ ಕದಿಯಬಹುದು., ಅವುಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆಯೂ ಸೇರಿದಂತೆ, ನಿಮ್ಮ ಖಾಸಗಿ ವಿಚಾರಗಳನ್ನು ಕದಿಯುವುದು ಹ್ಯಾಕರ್ಸ್’ಗಳಿಗೆ ಸುಲಭವಾಗಲಿದೆ. ಹೀಗಾಗಿ ಇವು ದೇಶದ ಭದ್ರತೆಗೂ ಒಳ್ಳೆಯದಲ್ಲ.   ಇಂಥದ್ದೊಂದು ಎಚ್ಚರಿಕೆ ಸಂದೇಶ ರವಾನಿಸಿರೋದು ಕೇಂದ್ರ ಗೃಹ ಸಚಿವಾಲಯ. ಇಂಥ ನಾಲ್ಕು ಅಪಾಯಕಾರಿ ಆಯಪ್’ಗಳನ್ನು ಸಚಿವಾಲಯವು ಪಟ್ಟಿ ಮಾಡಿದೆ. ಆ ನಾಲ್ಕು ಆಯಪ್’ಗಳನ್ನ ನಿಮ್ಮ ಮೊಬೈಲ್ನಿಂದ ಈ ಕ್ಷಣದಲ್ಲೇ  ಡಿಲೀಟ್ ಮಾಡಿಬಿಡಿ.

ಆ ನಾಲ್ಕು ಆಪ್ ಗಳ ವಿವರ ಇಲ್ಲಿದೆ ನೋಡಿ.

Top Gun- a gaming app

Mpjunkie- a music app

Bdjunkie- a video app

Talking Frog –  is an entertainment app.

Eesanje News App

 

Facebook Comments

Sri Raghav

Admin