ಈ ಬಾರಿ ದಸರಾದಲ್ಲಿ 1 ಗಂಟೆ ತಡವಾಗಿ ನಡೆಯಲಿದೆ ಪಂಜಿನ ಕವಾಯತು

ಈ ಸುದ್ದಿಯನ್ನು ಶೇರ್ ಮಾಡಿ

Panjina-Kaayitu

ಮೈಸೂರು, ಅ.9-ವಿಶ್ವವಿಖ್ಯಾತ ಮೈಸೂರು ದಸರಾ ಆಕರ್ಷಣೆಗಳಲ್ಲಿ ಒಂದಾದ ಪಂಜಿನ ಕವಾಯತು ಒಂದು ಗಂಟೆ ತಡವಾಗಿ ನಡೆಯಲಿದೆ. ಪ್ರತಿ ವರ್ಷ ಅರಮನೆಯಿಂದ ದಸರಾ ಮೆರವಣಿಗೆ 1 ಅಥವಾ 2 ಗಂಟೆಗೆ ಆರಂಭವಾಗಿ 5 ಅಥವಾ 6 ಗಂಟೆಗೆ ಬನ್ನಿ ಮಂಟಪ ತಲುಪುತ್ತಿತ್ತು. ನಂತರ 7 ಗಂಟೆಗೆ ಪಂಜಿನ ಕವಾಯತು ನಡೆಸಲಾಗುತ್ತಿತ್ತು. ಒಡೆಯರ್ ಕುಟುಂಬ ನಡೆಸುವ ವಿಜಯದಶಮಿ ಆಚರಣೆ ಮಂಗಳವಾರವೇ ನಡೆಯಲಿದ್ದು, ಒಡೆಯರ್ ಮನೆತನದ ಕಾರ್ಯಕ್ರಮ 2 ಗಂಟೆಗೆ ಮುಕ್ತಾಯವಾದ ನಂತರ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ನೀಡಲಾಗುತ್ತದೆ. ಅರ್ಜುನ ಬೆನ್ನಿಗೆ ಚಿನ್ನದ ಅಂಬಾರಿಯನ್ನು ಸುಭದ್ರವಾಗಿ ಕಟ್ಟಲು 1 ಗಂಟೆ ಸಮಯ ಬೇಕಾಗುತ್ತದೆ. ಇವೆಲ್ಲ ಸಿದ್ಧತೆಗಳು ಮುಗಿದು ಮೆರವಣಿಗೆ ಪ್ರಾರಂಭವಾಗುವ ವೇಳೆಗೆ ರಾಹುಕಾಲ ಪ್ರಾರಂಭವಾಗುವುದರಿಂದ ಸಂಜೆ 4.45ಕ್ಕೆ ಚಾಮುಂಡೇಶ್ವರಿ ಪೂಜೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.

ಮೆರವಣಿಗೆ ಬನ್ನಿಮಂಟಪ ತಲುಪಲು ಸುಮಾರು ಎರಡೂವರೆ ಅಥವಾ ಮೂರು ಗಂಟೆ ಸಮಯ ಬೇಕಾಗುವುದರಿಂದ ಪಂಜಿನ ಕವಾಯತು ಕೂಡ ತಡವಾಗಿ ಪ್ರಾರಂಭವಾಗಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin