ಈ ‘ಯುವರಾಜ’ನಿಂದ ವೀರ್ಯದಿಂದ ವರ್ಷಕ್ಕೆ 50 ಲಕ್ಷ ರೂ. ಲಾಭ..!

ಈ ಸುದ್ದಿಯನ್ನು ಶೇರ್ ಮಾಡಿ

Yuvaraja--01

ಅಲಹಾಬಾದ್, ಫೆ.27-ಈತನ ಹೆಸರು ಯುವರಾಜ. 11.5 ಅಡಿ ಉದ್ದ ಮತ್ತು 5.8 ಅಡಿ ಎತ್ತರವಿದ್ದಾನೆ. ಇವನದು 15 ಕ್ವಿಂಟಾಲ್‍ಗಳ (1500 ಕೆಜಿ) ಭರ್ಜರಿ ತೂಕ. ಕಡು ಕಪ್ಪು ವರ್ಣದಲ್ಲಿ ಮಿರಮಿರನೆ ಮಿಂಚುವ ಈತ ಪ್ರತಿ ದಿನ 20 ಲೀಟರ್ ಹಾಲು ಕುಡಿಯುತ್ತಾನೆ, 10 ಕೆಜಿ ಹಣ್ಣು ತಿನ್ನುತ್ತಾನೆ. ಯುವರಾಜ ಈಗ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಜನತೆಯ ಆಕರ್ಷಣೆಯ ಕೇಂದ್ರ ಬಿಂದು. ಅಲಹಾಬಾದ್ ಸಮೀಪದ ಚಿತ್ರಕೂಟದಲ್ಲಿ ಆಯೋಜಿಸಿರುವ ಗ್ರಾಮೋದಯ ಮೇಳದಲ್ಲಿ ಯುವರಾಜ ಎಂಬ ಹೆಸರಿನ ಕೋಣ ಎಲ್ಲ ಗಮನ ಸೆಳೆಯುತ್ತಿದೆ. ಯುವರಾಜನ ಮೌಲ್ಯ 9.25 ಕೋಟಿ ರೂ.ಗಳು.

ಒಂಭತ್ತು ವರ್ಷದ ಈ ಕೋಣಕ್ಕೆ ಪ್ರತಿದಿನ 5 ಕೆಜಿ ಹಸೀ ಹುಲ್ಲು ಮತ್ತು 4 ಕೆಜಿ ಒಣ ಹುಲ್ಲು ಬೇಕು. ಇದರ ಮಾಲೀಕ ಹರ್ಯಾಣದ ಕುರುಕ್ಷೇತ್ರದ ನಿವಾಸಿ ಕರಮ್‍ವೀರ್ ಸಿಂಗ್. ಯುವರಾಜನ ಪ್ರತಿದಿನದ ಆಹಾರಕ್ಕಾಗಿ ಇದರ ಒಡೆಯ ಸುಮಾರು 4,000 ರೂ.ಗಳನ್ನು ಖರ್ಚು ಮಾಡುತ್ತಾನೆ. ಇದನ್ನು ಪ್ರತಿದಿನ 5 ಕಿ.ಮೀ. ವಾಯು ವಿಹಾರಕ್ಕೆ ಕರೆದೊಯ್ಯಬೇಕು.   ಯುವರಾಜನಿಗಾಗಿ ಇಷ್ಟೊಂದು ಹಣ ಖರ್ಚು ಮಾಡಿದರೂ ಭರ್ಜರಿ ಲಾಭವಿದೆ. ಈತನಿಂದ ಸಿಂಗ್‍ಗೆ ಪ್ರತಿ ವರ್ಷ 50 ಲಕ್ಷ ರೂ.ಗಿಂತ ಅಧಿಕ ಲಾಭವಿದೆ. ಹೇಗೆ ಎನ್ನುತ್ತೀರಾ ?  ಯುವರಾಜನ ಧಾತುವಿಗೆ (ವೀರ್ಯ) ಭಾರೀ ಬೆಲೆ. ಆಧುನಿಕ ಉದ್ದೀಪನ (ಉದ್ರೇಕ) ಮೂಲಕ ಒಮ್ಮೆ ಈ ಕೋಣ 15 ಎಂಎಲ್ ವೀರ್ಯ ಉತ್ಪಾದಿಸುತ್ತದೆ.. ಇದನ್ನು ವೈಜ್ಞಾನಿಕವಾಗಿ ಸಂಸ್ಕರಿಸಿದರೆ 900 ಡೋಸ್‍ಗಳಾಷ್ಟಾಗುತ್ತದೆ.  ಒಂದು ಸಿಂಗಲ್ ಡೋಸ್‍ಗೆ 600 ರೂ. ಬೆಲೆ ಇದೆ. ಅಂದರೆ ಒಂದು ವರ್ಷಕ್ಕೆ 50 ಲಕ್ಷ ರೂ.ಗಳ ಲಾಭ ಇದೆ. ಇದರಿಂದ ಎಮ್ಮೆಗಳಲ್ಲಿ ಹೈಬ್ರಿಡ್ ಸಂತಾನೋತ್ಪತ್ತಿಗೆ ಸಹಕಾರಿ ಎನ್ನುತಾರೆ ಕರಮ್‍ವೀರ್ ಸಿಂಗ್.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin