ಈ ವಾರ ಕೋಮಲ್ ಅಭಿನಯದ ‘ಡೀಲ್ ರಾಜ’ ರಿಲೀಸ್

ಈ ಸುದ್ದಿಯನ್ನು ಶೇರ್ ಮಾಡಿ

1d910c256c02cc29193a5d0f864b415f_XLಹಾಸ್ಯನಟ ಕೋಮಲ್ಕುಮಾರ್ ಡೀಲ್ ಮಾಡುವ ರಾಜನಾಗಿ  ಅಭಿನಯಿಸಿರುವ  ಡೀಲ್ರಾಜ ಚಿತ್ರ ಇದೇ 29ರ ಶುಕ್ರವಾರದಂದು  ರಾಜ್ಯಾಯದ್ಯಂತ  ಬಿಡುಗಡೆಯಾಗುತ್ತಿದೆ. ಸಡಗರ ಚಿತ್ರದ ನಿರ್ದೇಶಕ ರಾಜ್ಗೋಪಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಎರಡನೇ ಚಿತ್ರವಿದಾಗಿದ್ದು,  ಈ ಚಿತ್ರವನ್ನು ರವಿಚಂದ್ರ ರೆಡ್ಡಿ ಮತ್ತು ಕೃಷ್ಣಮೂರ್ತಿ ಅವರು ತಮ್ಮ ಮೇಘಧೂತ್ ಮೂವೀಸ್ಬ್ಯಾನರ್ ಅಡಿಯಲ್ಲಿ  ನಿರ್ಮಾಣ ಮಾಡಿದ್ದಾರೆ.
ಹಾಸ್ಯದ ಜೊತೆ ಗಂಭೀರ ಕಥೆಯನ್ನು ಹೊಂದಿರುವ ಡೀಲ್ರಾಜ ಚಿತ್ರವು ತನ್ನ ಚಿತ್ರೀಕರಣ ಹಂತದಿಂದಲೇ ಒಂದಲ್ಲಾ ಒಂದು ವಿಶೇಷತೆಗಳಿಂದ ಸದ್ದು ಮಾಡುತ್ತಲೇ ಬಂದಿತ್ತು. ಕೋಮಲ್ ಅವರಿಗೆ ಈ ಚಿತ್ರ ಒಂದು ಹೊಸ ಬ್ರೇಕ್ನ್ನು  ಖಂಡಿತ ನೀಡುತ್ತದೆ ಎಂಬ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಆರಂಭದಿಂದಲೂ ಚಿತ್ರದ ಬಗ್ಗ ವಿಶೇಷವಾದ  ಪ್ರೀತಿಯನ್ನು  ಹೊಂದಿದ್ದ ನಿರ್ಮಾಪಕರಾದ ರವಿಚಂದ್ರ ರೆಡ್ಡಿ, ಶ್ರೀಕಾಂತ್ ರೆಡ್ಡಿ ಮತ್ತು ಕೃಷ್ಣಮೂರ್ತಿ ಅವರು ಚಿತ್ರ ಉತ್ತಮವಾಗಿ ಮೂಡಿಬರಲೆಂದು ಚಿತ್ರಕ್ಕೆ ಯಾವ ಹಂತದಲ್ಲೂ ಕೊರತೆಮಾಡದೆ ಹಣಕಾಸು ಒದಗಿಸಿರುವುದರಿಂದಲೇ ಚಿತ್ರ ಇಷ್ಟೊಂದು ಉತ್ತಮವಾಗಿ ಮೂಡಿಬಂದಿದೆ ಎಂದು ನಿರ್ದೇಶಕರಾದ ರಾಜ್ಗೋಪಿ ಅವರು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ. ನಾಯಕನಟ ಕೋಮಲ್ ಈ ಚಿತ್ರದಲ್ಲಿ ತುಂಬಾ ವಿಭಿನ್ನವಾದ ಪಾತ್ರವೊಂದರಲ್ಲಿ  ಕಾಣಿಸಿಕೊಂಡಿದ್ದಾರೆ. ಅವರಿಗೆ ಈ ಚಿತ್ರದಿಂದ ಹೊಸ ಇಮೇಜ್ ದೊರಕುವುದು ಗ್ಯಾರಂಟಿ ಎಂದು ಕೂಡ ಅವರು ಹೇಳಿದ್ದಾರೆ.

ಡೀಲ್ರಾಜ ಚಿತ್ರದಲ್ಲಿ ಅಭಿಮನ್ರಾಯ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಎಲ್ಲಾಕಡೆ ಈಗಾಗಲೇ ಸಖತ್ತಾಗಿ ಸೌಂಡ್ ಮಾಡಿವೆ. ರೇಡಿಯೋ ಜಾಕಿಯಾಗಿ ಹೆಸರುಮಾಡಿ ಸಿನಿಮಾವೊಂದರಲ್ಲಿ ನಾಯಕಿಯಾಗಿಯೂ ಕಾಣಿಸಿಕೊಂಡ ರಶ್ಮಿ ಈ ಚಿತ್ರದ ಮೂಲಕ ಗಾಯಕಿಯಾಗಿ ಹೊರಹೊಮ್ಮಿದ್ದಾರೆ. ರಿಂಗ ರಿಂಗ ರಿಂಗ ರಿಂಗ್ ಸ್ವಾಮಿ ಎನ್ನುವ ಹೊಸ ಶೈಲಿಯ ಹಾಡಿಗೆ ಅವರು ದನಿಯಾಗಿದ್ದಾರೆ. ಈ ಹಾಡು ಕೂಡಾ ಈಗಾಗಲೇ ಜನಮನ ಗೆದ್ದಿದೆ. ಅದಕ್ಕಿಂತ ಮುಖ್ಯವಾಗಿ  ನಿನ್ನನ್ನೆ ನಂಬಿರುವೆ ಪದ್ಮಾವತಿ  ಹಾಡಂತೂ ಇಂಟರ್ನೆಟ್ನಲ್ಲಿ ವೈರಲ್ ಆಗಿ  ಜನಪ್ರಿಯತೆ ಪಡೆದುಕೊಂಡಿದೆ.

ನಿರ್ದೇಶಕ ಎಸ್. ನಾರಾಯಣ್ ಅವರ ಬಳಿ ಸಹಾಯಕರಾಗಿದ್ದ ರಾಜ್ಗೋಪಿ,  ಸಡಗರ ಮೂಲಕ  ನಿರ್ದೇಶಕನಾಗಿ ಚಿತ್ರರಂಗ ಪ್ರವೇಶಿಸಿದ್ದರು. ಈಗ ಡೀಲ್ ರಾಜನನ್ನು ನಿರ್ದೇಶಿಸಿದ್ದಾರೆ. ಅಭಿಮನ್ರಾಯ್ ಅವರ ಸಂಗೀತ, ಜೈಆನಂದ್ ಅವರ  ಛಾಯಾಗ್ರಹಣ, ಎನ್.ಎಂ. ವಿಶ್ವ ಸಂಕಲನ, ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಕೋಮಲ್ ಜೊತೆಗೆ ನಾಯಕಿಯಾಗಿ ಭಾನುಶ್ರೀ ಮೆಹ್ತಾ ನಟಿಸಿದ್ದಾರೆ. ಸಾಧು ಕೋಕಿಲಾ, ಬುಲೆಟ್ ಪ್ರಕಾಶ್, ತಬಲಾ ನಾಣಿ, ಅವಿನಾಶ್, ಸುಮನ್ ರಂಗನಾಥ್, ಜೈ ಜಗದೀಶ್, ಮಿತ್ರ, ಕುರಿ ಪ್ರತಾಪ್, ಅರುಣ್ ಬಾಲಾಜಿ, ಸುಚಿತ್ರ, ಎಂ.ಎನ್. ಲಕ್ಷ್ಮೀದೇವಿ, ರಾಕ್ಲೈನ್ ಸುಧಾಕರ್, ಪಂಕಜಮ್ಮ, ಹಂಸತಾಜ್, ಜಂಗ್ಲಿ ಪ್ರಸನ್ನ, ಮಿಮಿಕ್ರಿ ಗೋಪಿ, ಗಣೇಶ್ ರಾವ್, ಸುಚೇಂದ್ರ ಪ್ರಸಾದ್, ಶೃಂಗೇರಿ ರಾಮಣ್ಣ…. ಹೀಗೆ ಕನ್ನಡದ ಬಹುತೇಕ ಖ್ಯಾತ ಪೋಷಕ ಕಲಾವಿದರು, ಹಾಸ್ಯ ನಟರ ದಂಡು ಡೀಲ್ ರಾಜನಿಗೆ ಸಾಥ್ ನೀಡಿದ್ದಾರೆ.

 

Facebook Comments

Leave a Comments