ಈ ವಾರ ತೆರೆ ಮೇಲೆ ‘ಮಡಮಕ್ಕಿ’ ಮೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Madamakki-n

ಶ್ರೀ ರಾಮ ಟಾಕೀಸ್ ಲಾಂಛನದಲ್ಲಿ ಶಿವಣ್ಣ ದಾಸನಪುರ ಅವರು ನಿರ್ಮಿಸಿರುವ ಮಡಮಕ್ಕಿ ಚಿತ್ರ ಈ ವಾರ ರಾಜದ್ಯಂತ ಬಿಡುಗಡೆಯಾಗುತ್ತಿದೆ. ವಿನಯ್ ಪ್ರೀತಮ್ ಕಥೆ, ಚಿತ್ರಕಥೆ ಬರೆದು ನಿರ್ದೇಶನವಿರುವ ಈ ಚಿತ್ರದಲ್ಲಿ ತನುಷ್ ನಾಯಕನಾಗಿ ಮಿಂಚಲಿದ್ದಾರೆ. ನಿಖಿತಾ ನಾರಾಯಣ್ ಇವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದು, ಸಾಯಿಕುಮಾರ್ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಳ್ಳಿಯಿಂದ ಬೆಂಗಳೂರಿನ ಕಡೆಗೆ ಸಾಗುವ ನಾಯಕ ನಂತರ ಮುಂಬೈಗೆ ಹೊರಡುತ್ತಾನೆ. ಆಗ ಅಲ್ಲಿ ನಡೆಯುವ ಕೆಲವು ಘಟನೆಗಳು ನಾಯಕನ ಬದುಕಿನಲ್ಲಿ ಹಲವು ತಿರುವುಗಳನ್ನು ಒಡ್ಡುತ್ತಾ ಹೋಗುತ್ತವೆ.  ಇದರಿಂದ ಹೇಗೆ ಹೊರಬರುತ್ತಾನೆ, ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆ ಎಂಬ ಎಳೆಯನ್ನು ಬಹಳ ಸೂಕ್ಷ್ಮವಾಗಿ ನಿರ್ದೇಶಕರು ತೆರೆ ಮೇಲೆ ತಂದಿದ್ದಾರಂತೆ. ಹಿರಿಯ ನಟಿ ತಾರಾ ಕೂಡ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಅವರು ಸಂಗೀತ ನೀಡಿದ್ದು, ಒಟ್ಟು ನಾಲ್ಕು ಹಾಡುಗಳೂ ಬಹಳ ವಿಭಿನ್ನವಾಗಿ ಮೂಡಿಬಂದಿವೆಯಂತೆ.

ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮದನ್ ಹರಿಣಿ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ತನುಷ್, ಸಾಯಿಕುಮಾರ್, ಕರಿಸುಬ್ಬು, ಮುನಿ ರಾಜೇಂದ್ರ ಕಾರಂತ್, ಸಂದೀಪ್ ಮುಂತಾದವರಿದ್ದಾರೆ.  ನಿರೀಕ್ಷೆಯಂತೆ ರಾಜ್ಯಾದ್ಯಂತ ಮಡಮಕ್ಕಿಯು ಬೆಳ್ಳಿ ಪರದೆ ಮೇಲೆ ರಾರಾಜಿಸಲಿದ್ದು, ಪ್ರೇಕ್ಷಕ ಪ್ರಭುಗಳು ಈ ಚಿತ್ರವನ್ನು ಯಾವ ಪರಿ ಮೆಚ್ಚುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

► Follow us on –  Facebook / Twitter  / Google+

Facebook Comments

Sri Raghav

Admin