ಈ ವಾರ ಸ್ಯಾಂಡಲ್‍ವುಡ್‍ನ ಒನ್ ಅಂಡ್ ಓನ್ಲಿ ‘ರಾಜಕುಮಾರ’ ರಿಲೀಸ್

ಈ ಸುದ್ದಿಯನ್ನು ಶೇರ್ ಮಾಡಿ

rajakumara

ಕನ್ನಡದ ರಾಜರತ್ನ ತೆರೆಗೆ ಬರಲು ಸಿದ್ಧವಾಗಿದ್ದಾರೆ. ಗಾಂಧಿನಗರದಲ್ಲಿ ಒಂದು ಸ್ಟಾರ್ ಚಿತ್ರ ರಿಲೀಸಾಗುತ್ತಿದೆಯೆಂದರೆ ಆ ವಾರ ಬೇರೆ ಯಾವುದೇ ಕನ್ನಡ ಚಿತ್ರಗಳು ರಿಲೀಸಾಗುವುದಿಲ್ಲ. ಅದರಂತೆ ಈ ವಾರ ಸ್ಯಾಂಡಲ್‍ವುಡ್‍ನ ಒನ್ ಅಂಡ್ ಓನ್ಲಿ ಚಿತ್ರವಾಗಿ ರಾಜಕುಮಾರ ಬರುತ್ತಿದ್ದಾನೆ. ಕಳೆದ ವರ್ಷ ರಿಲೀಸಾದ ದೊಡ್ಮನೆ ಹುಡುಗ ಚಿತ್ರದ ನಂತರ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಮತ್ತೊಂದು ಮೋಸ್ಟ್ ಎಕ್ಸ್‍ಪೆಕ್ಟೆಡ್ ಸಿನಿಮಾ ಇದಾಗಿದೆ. ಈಗಾಗಲೇ ಟ್ರೇಲರ್‍ಗಳು ಮತ್ತು ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದ ಈ ಚಿತ್ರ ಅಭಿಮಾನಿಗಳಿಗೆ ಮುಂಬರುವ ಯುಗಾದಿ ಹಬ್ಬದ ಖುಷಿಯನ್ನು ಡಬಲ್ ಮಾಡಲಿದೆ.

5

ಕರ್ನಾಟಕದಾದ್ಯಂತ ಸುಮಾರು 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ರಾಜಕುಮಾರ ತೆರೆಗೆ ಬರುತ್ತಿದ್ದಾನೆ. ಇತ್ತೀಚೆಗಷ್ಟೆ ಬಿಡುಗಡೆಯಾಗಿರುವ ರಾಜಕುಮಾರ ಸಿನಿಮಾದ ಹಾಡುಗಳನ್ನು ಕೇಳಿದವರೆಲ್ಲ ಅದ್ಭುತವಾದ ಮೆಲೋಡಿಯಸ್ ಸಾಂಗ್ಸ್ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದು ಸಹಜವಾಗಿಯೇ ಚಿತ್ರತಂಡದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ.ಇನ್ನು ದೊಡ್ಮನೆ ಹುಡುಗ ಚಿತ್ರವು ಪುನೀತ್‍ರಾಜ್‍ಕುಮಾರ್ ಅವರಿಗೆ ನಿರೀಕ್ಷಿತ ಗೆಲುವು ತಂದುಕೊಡಲಿಲ್ಲ, ಹಾಗಾಗಿ ಸಹಜವಾಗಿಯೇ ರಾಜಕುಮಾರ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿಯೇ ಇದೆ. ದೊಡ್ಡ ಬಜೆಟ್, ಬಹು ದೊಡ್ಡ ತಾರಾಬಳಗ, ರಿಚ್ ಮೇಕಿಂಗ್ ಹೀಗೆ ತನ್ನ ಹಲವಾರು ವಿಶೇಷತೆಗಳಿಂದ ಸಿನಿಪ್ರಿಯರ ಗಮನವನ್ನು ತನ್ನತ್ತ ಸೆಳೆದಿರುವ ರಾಜಕುಮಾರ ನಾಳೆಯಿಂದ ಬೆಳ್ಳಿತೆರೆಯ ಮೇಲೆಯೂ ದೊಡ್ಡ ಕಮಾಲ್ ಮಾಡಲಿದ್ದಾನೆ. ಇನ್ನು ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಜೊತೆ ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ. ಉಳಿದಂತೆ ತಮಿಳಿನ ಖ್ಯಾತನಟ ಶರತ್‍ಕುಮಾರ್ ಪುನೀತ್ ಅವರ ತಂದೆಯಾಗಿ ಕಾಣಿಸಿಕೊಂಡಿದ್ದಾರೆ.

9

ಪಂಚಭಾಷಾ ನಟ ಪ್ರಕಾಶ್ ರೈ, ಹಿರಿಯನಟ ಅನಂತನಾಗ್, ರಂಗಾಯಣ ರಘು, ದತ್ತಣ್ಣ, ಅಚ್ಯುತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ, ಅವಿನಾಶ್, ಚಿತ್ರಾಶೆಣೈ, ವಿಜಯಲಕ್ಷ್ಮೀಸಿಂಗ್, ವೆಂಕಟ್‍ರಾವ್ ಹಾಗೂ ಖಳನಟ ದಿ.ಅನಿಲ್ ಸೇರಿದಂತೆ ಹಲವಾರು ಕಲಾವಿದರ ದಂಡೇ ಈ ಚಿತ್ರದಲ್ಲಿ ಕಾಣಿಸಿಕೊಂಡಿದೆ.
ಈ ಹಿಂದೆ ಪುನೀತ್ ಅಭಿನಯದ ನಿನ್ನಿಂದಲೇ.. ಮತ್ತು ರಾಕಿಂಗ್‍ಸ್ಟಾರ್ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‍ನಡಿಯಲ್ಲಿ ನಿರ್ಮಾಣವಾಗಿರುವ ಮತ್ತೊಂದು ಬಿಗ್ ಬಜೆಟ್ ಚಿತ್ರ ಇದಾಗಿದೆ.ನಿರ್ಮಾಪಕ ವಿಜಯ್ ಕಿರಗಂದೂರು ಬಂಡವಾಳ ಹೂಡಿ ಚಿತ್ರ ನಿರ್ಮಿಸಿದ್ದಾರೆ.

1

ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಅವರೇ ರಾಜಕುಮಾರ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ್ದಾರೆ, ನಿರ್ದೇಶಕ ಸಂತೋಷ್ ಆನಂದರಾಮ್ ಮತ್ತು ಯೋಗರಾಜ್ ಭಟ್ ಹಾಗೂ ಗೌಸ್‍ಪೀರ್ ಹಾಡುಗಳಿಗೆ ಸಾಹಿತ್ಯವನ್ನು ರಚಿಸಿದ್ದಾರೆ. ಬಹಳಷ್ಟು ನಿರೀಕ್ಷೆಯೊಂದಿಗೆ ಬಿಡುಗಡೆಗೊಳ್ಳುತ್ತಿರುವ ರಾಜಕುಮಾರ ಚಿತ್ರವನ್ನು ವೀಕ್ಷಿಸಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದು, ಈಗಾಗಲೇ ಮುಂಗಡ ಟಿಕೆಟ್‍ಗಳನ್ನು ಆನ್‍ಲೈನ್ ಮೂಲಕ ಪಡೆಯುತ್ತಿದ್ದಾರೆ. ಬಿಡುಗಡೆ ದಿನದಂದು ಅಭಿಮಾನಿಗಳಿಂದ ಪುನೀತ್ ರಾಜ್‍ಕುಮಾರ್ ಅವರ ಕಟೌಟ್‍ಗಳಿಗೆ ಹಾಲು ಹಾಗೂ ಹೂವಿನ ಅಭಿಷೇಕ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

2

3

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin