‘ಈ ಸಂಜೆ’ಯ ಹಿರಿಯ ಪತ್ರಕರ್ತ ರಾಮಸ್ವಾಮಿ ಕಣ್ವ ಸೇರಿ 15 ಮಂದಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

Madyama-Academy

ಬೆಂಗಳೂರು, ಮಾ.10– ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಸಂಜೆ 5 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯಿತು  ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ರೋಷನ್‍ಬೇಗ್ ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು, ಸಚಿವರಾದ ಕೆ.ಜೆ.ಜಾರ್ಜ್, ಆರ್.ರಾಮಲಿಂಗಾರೆಡ್ಡಿ, ಎಂ.ಕೃಷ್ಣಪ್ಪ, ಕೃಷ್ಣಬೈರೇಗೌಡ, ಎಂ.ಆರ್.ಸೀತಾರಾಂ, ಸಂಸದ ಪಿ.ಸಿ.ಮೋಹನ್, ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು, ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ್, ನಿರ್ದೇಶಕ ಎನ್.ಆರ್.ವಿಶುಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.

2016ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ರಾಮಸ್ವಾಮಿ ಕಣ್ವ, ಎಚ್.ಆರ್.ಶ್ರೀಶ, ಶಾಂತಲಧರ್ಮರಾಜ್, ಎಂ.ವೀರಣ್ಣ, ಮೊಹಮ್ಮದ್ ಸಿದ್ದಿಕಿ ಆಲ್ದೂರಿ, ರೊನಾಲ್ಡ್ ಅನಿಲ್ ಫರ್ನಾಂಡೀಸ್, ಎ.ಸಿ.ಪ್ರಭಾಕರ್, ಉಜ್ಜನಿ ರುದ್ರಪ್ಪ, ಹೇಂಮತಕುಮಾರ್, ಶಂಕರಪ್ಪ ಹುಸನಪ್ಪ ಛಲವಾದಿ, ನಾಗರಾಜ್ ಸುಣಗಾರ, ಅನಿಲ್‍ಕುಮಾರ್ ಚಂದ್ರಶೇಖರ್ ಹೊಸಮನಿ, ಮಾಲತೇಶ್ ಗದೆಗಪ್ಪ ಅಂಗೂರ, ಕೆ.ಎಸ್.ಚಂದ್ರು(ಹೇಮಚಂದ್ರನಾಯಕ್) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.

Madyama Academy Award 2

ಅಲ್ಲದೆ, ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿಗೆ ಶಿವಮೊಗ್ಗ ಟೈಮ್ಸ್, ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿಗೆ ಉದಯವಾಣಿಯ ಚಂದ್ರಶೇಖರ ಮೋರೆ, ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿಗೆ ವಿಜಯಕರ್ನಾಟಕದ ಸಿ.ಜೆ.ರಾಜೀವ, ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ಅರಗಿಣಿ ಪ್ರಶಸ್ತಿಗೆ ಸಂಯುಕ್ತ ಕರ್ನಾಟಕದ ಸ್ನೇಹಪ್ರಿಯ ನಾಗರಾಜ್, ತಳ ಸಮುದಾಯದ ಬಗೆಗಿನ ಬರಹಗಳ ಅಂಕಣಕಾರರಿಗೆ ನೀಡುವ ಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗೆ ಡಾ.ನಟರಾಜ್ ಹುಳಿಯಾರು ಅವರಿಗೆ ದೊರೆತಿದ್ದು, ಎಲ್ಲರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಫಲಕ, ನಗದು ಪುರಸ್ಕಾರ ನೀಡಿ ಅಭಿನಂದಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ರುದ್ರಣ್ಣ ಹರ್ತಿಕೋಟೆ, ಕೆ.ಶಿವಕುಮಾರ್, ಮುತ್ತುನಾಯ್ಕರ್, ಟಿ.ಎಸ್.ರಂಗಣ್ಣ, ಬಿ.ವೆಂಕಟಸಿಂಗ್, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎಸ್.ಶಂಕರಪ್ಪ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Madyama Academy Award 1

Madyama Academy Award 3

Facebook Comments

Sri Raghav

Admin