‘ಈ ಸಂಜೆ’ ಫಲಶ್ರುತಿ : ಕೊನೆಗೂ ಬಾಗಿಲು ತೆಗೆಯಿತು ಸಾರ್ವಜನಿಕ ಶೌಚಾಲಯ

ಈ ಸುದ್ದಿಯನ್ನು ಶೇರ್ ಮಾಡಿ

Toilet

ಯಲಹಂಕ, ಜು.17- ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್2ರ ಪುಟ್ಟೇನಹಳ್ಳಿಯ ಸಾರ್ವಜನಿಕ ಶೌಚಾಲಯಕ್ಕೆ ಕಾಯಕಲ್ಪ ಸಿಕ್ಕಿದೆ. ಈ ಸಂಜೆಯಲ್ಲಿ ವರದಿ ಮಾಡಿದ್ದರ ಫಲವಾಗಿ ಸುಸಜ್ಜಿತವಾದ ಶೌಚಾಲಯದ ಭಾಗಿಲು ತೆರೆದು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗಿದೆ. ಜನಪ್ರತಿನಿಧಿಗಳ ಕಿತ್ತಾಟದಿಂದ ಬಹುಪಯೋಗಿ ಮತ್ತು ಅತ್ಯವಶ್ಯಕವಾಗಿದ್ದ ಪುಟ್ಟೇನಹಳ್ಳಿ ಜನನಿಬಿಡ ಪ್ರದೇಶದ ಸಾರ್ವಜನಿಕ ಶೌಚಾಲಯ ಹಲವು ತಿಂಗಳುಗಳಿಂದ ಬಾಗಿಲು ಮುಚ್ಚಿ ಸಾರ್ವಜನಿಕರು ಶೌಚಕ್ಕಾಗಿ ಬಯಲುಗಳನ್ನೆ ಅವಲಂಬಿಸುವಂತಾಗಿತ್ತು.

ಇದರ ಬಗ್ಗೆ ಈ ಸಂಜೆ ಪತ್ರಿಕೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ವರದಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಂಡು ಸದ್ದು ಮಾಡದೆ ಕೆಲಸ ಮಾಡಿ ಮುಗಿಸಿದ್ದಾರೆ. ಇದರಿಂದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದು ಜನರಿಗೆ ಸ್ಪಂದಿಸಿದ ಪತ್ರಿಕೆಗೆ ಧನ್ಯವಾದ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin