‘ಈ ಸಂಜೆ’ ವರದಿಗಾರ ಕುಮಾರ್ ಸೇರಿ 45 ಮಂದಿಗೆ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

CS-Kumar

ತುಮಕೂರು, ಅ.29– ಈ ಸಂಜೆ ಪತ್ರಿಕೆಯ ವರದಿಗಾರ ಸಿ.ಎಸ್.ಕುಮಾರ್ ಚೇಳೂರು ಸೇರಿದಂತೆ 8 ಮಂದಿ ಪತ್ರಕರ್ತರನ್ನು ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 45 ಸಾಧಕರನ್ನು ಜಿಲ್ಲಾಡಳಿತ ಆಯ್ಕೆ ಮಾಡಿದೆ. ಇದರಲ್ಲಿ ಪತ್ರಕರ್ತರಾದ ಈ ಸಂಜೆ ಜಿಲ್ಲಾ ವರದಿಗಾರ ಸಿ.ಎಸ್.ಕುಮಾರ್ ಚೇಳೂರು, ವಾರ್ತಾ ಭಾರತಿ ಪತ್ರಿಕೆಯ ಜಿಲ್ಲಾ ವರದಿಗಾರ ಎಸ್.ಡಿ.ರಂಗರಾಜು, ವಿಜಯವಾಣಿ ಪತ್ರಿಕೆ ವರದಿಗಾರ ಜಗನ್ನಾಥ್ ಕಾಳೇನಹಳ್ಳಿ, ನಾಗಭೂಷಣ್, ಚಂದ್ರಶೇಖರ್, ನರಸಿಂಹರಾಜು, ಈ ಟಿವಿಯ ಚಂದ್ರಶೇಖರ್ ಸೇರಿದಂತೆ ಒಟ್ಟು 8 ಮಂದಿ ಪತ್ರಕರ್ತರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನ.4ರಂದು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಅಭಿನಂದಿಸಲಾಗುತ್ತದೆ. ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.  ಸುಮಾರು 13 ವರ್ಷಗಳಿಂದ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಕುಮಾರ್ ಅವರನ್ನು ಇತ್ತೀಚೆಗಷ್ಟೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪತ್ರಕರ್ತರ ಸಂಘದ ವತಿಯಿಂದ ವರ್ಷದ ಶ್ರೇಷ್ಠ ಸಾಧನೆಯ ವ್ಯಕ್ತಿ ಎಂಬ ಪ್ರಶಸ್ತಿಗೆ ಆಯ್ಕೆ ಮಾಡಿ ಅಭಿನಂದಿಸಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin