ಈ ಸ್ಟೋರಿ ಓದಿದ ನಂತರ ತಪ್ಪದೇ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡ್ಕೊಳಿ..!

ಈ ಸುದ್ದಿಯನ್ನು ಶೇರ್ ಮಾಡಿ

Online-Shoping--01

ಚಿಕ್ಕಮಗಳೂರು, ಸೆ.16- ಜಿಲ್ಲೆಯ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಭೀಮೇಶ್ವರ ಚೋಶಿ ಅವರ ಡೆಬಿಟ್ ಕಾರ್ಡ್ ಹ್ಯಾಕ್ ಮಾಡಿರುವ ವಂಚಕರು 21 ಲಕ್ಷ ರೂ. ಲಪಟಾಯಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಭೀಮೇಶ್ವರ ಚೋಶಿ ಅವರು ಸೆ.14ರಂದು ತಮ್ಮ ಖಾತೆ ವಿವರ ಪರಿಶೀಲಿಸಿದಾಗ ವಂಚನೆ ನಡೆದಿರುವುದು ಬಯಲಾಗಿದೆ. ಜೋಶಿ ಅವರು ಯುರೋಪ್ ಪ್ರವಾಸದಲ್ಲಿದ್ದಾಗ ಸೆ.4ರಂದು ಇವರದೇ ಕಾರ್ಡ್ ಬಳಸಿ ಶಾಪಿಂಗ್ ಮಾಡಿದ್ದರು. ಅಂದಿನ ಬ್ಯಾಲೆನ್ಸ್ 25 ಲಕ್ಷ ರೂ. ಗಳಿತ್ತು. ಅನಂತರ ಸೆ.4ರಿಂದ 13ರವರೆಗೆ ಹಲವು ಬಾರಿ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಅವರ ಕಳಸಾದ ಕರ್ನಾಟಕ ಬ್ಯಾಂಕ್‍ನಿಂದ 21 ಲಕ್ಷ ರೂ.ವರೆಗೂ ಆನ್‍ಲೈನ್ ಶಾಪಿಂಗ್ ಮಾಡಿ ಕನ್ನ ಹಾಕಿದ್ದಾರೆ.

ಹಣ ಕಡಿತವಾದ ಸಂದೇಶ ಇವರ ಮೊಬೈಲ್‍ಗೆ ಬಂದರೂ ಗಮನಿಸಿದೆ ಇದ್ದದ್ದು ಇಷ್ಟು ದೊಡ್ಡ ಮೊತ್ತದ ಹಣ ಕಳೆದುಕೊಳ್ಳಲು ಕಾರಣವಾಗಿದೆ ಎನ್ನಲಾಗಿದೆ.ಸೆ.6ರಂದು ಭಾರತಕ್ಕೆ ಬಂದ ನಂತರವೂ ತಮ್ಮ ಬ್ಯಾಂಕ್ ಖಾತೆ ವಿವರ ಪರಿಶೀಲಿಸಿರಲಿಲ್ಲ. ಸೆ.14ರಂದು ಖಾತೆ ಪರಿಶೀಲಿಸಿದಾಗ ದುಷ್ಕರ್ಮಿಗಳು ಹ್ಯಾಕ್ ಮಾಡಿ ವಂಚನೆ ನಡೆಸಿರುವುದು ಗಮನಕ್ಕೆ ಬಂದಿದೆ. ಕೂಡಲೇ ಚಿಕ್ಕಮಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.  ಐಟಿ ಕಾಯ್ದೆ 66ಡಿ ಮತ್ತು ಐಪಿಸಿ 420 ವಂಚನೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಬೆಂಗಳೂರು ಸೈಬರ್ ವಿಭಾಗಕ್ಕೆ ವರ್ಗಾಹಿಸಲಾಗುವುದು ಎಂದು ಚಿಕ್ಕಮಗಳೂರು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin