ಈ ಹುಲಿ ಹಿಡಿಯಲು ಖರ್ಚಾಗಿದ್ದು ಬರೋಬ್ಬರಿ 1 ಕೋಟಿ ರೂ…!

ಈ ಸುದ್ದಿಯನ್ನು ಶೇರ್ ಮಾಡಿ

Tiger-02
ನೈನಿತಾಲ್(ಉತ್ತರಖಂಡ್)- ಕೊನೆಗೂ ನರಭಕ್ಷಕ ಹುಲಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಹೆಲಿಕಾಪ್ಟರ್, ಡ್ರೋಣ್, ಸಿ.ಸಿ. ಕ್ಯಾಮೆರಾ ಬಳಸಿ, 1 ಕೋಟಿ ರೂ. ವೆಚ್ಛದಲ್ಲಿ ನಡೆದ ಬೃಹತ್ ಕಾರ್ಯಾಚರಣೆ ಅಂತ್ಯವಾಗಿದೆ.ಉತ್ತರಖಂಡ್ ಪಶ್ಚಿಮ ಭಾಗದಲ್ಲಿ ನರಭಕ್ಷಕ ಹುಲಿ ಸೆರೆಗೆ ಬರೋಬ್ಬರಿ 40 ದಿನಗಳ ಕಾರ್ಯಾಚರಣೆ ನಡೆಸಲಾಗಿತ್ತು. ಸುತ್ತಲಿನ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು, ಮನುಷ್ಯನ ರಕ್ತದ ರುಚಿ ಕಂಡಿದ್ದ ಹುಲಿ, ಹಳ್ಳಿಗಳಿಗೆ ನುಗ್ಗಿ ಮನುಷ್ಯರನ್ನೇ ಟಾರ್ಗೆಟ್ ಮಾಡಿ ಎಳೆದೊಯ್ಯುತ್ತಿತ್ತು. ಈ ಹುಲಿ ಸೆರೆಗೆ 40 ದಿನಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಪ್ರಯತ್ನ ಫಲಿಸಿರಲಿಲ್ಲ.

ಕಾಡಿನಲ್ಲಿ 150 ಕ್ಕೂ ಹೆಚ್ಚು ಜನರ ತಂಡ ಕೂಂಬಿಂಗ್ ನಡೆಸಿ, ಸಿ.ಸಿ. ಕ್ಯಾಮೆರಾ ಇಟ್ಟು, ಡ್ರೋಣ್ ಹಾಗೂ ಹೆಲಿಕಾಪ್ಟರ್ ಮೂಲಕವೂ ಹುಡುಕಾಟ ನಡೆಸಿತ್ತು.ಇದಕ್ಕಾಗಿ 1 ಕೋಟಿ ರೂ. ವೆಚ್ಚವಾಗಿತ್ತು. ಆದರೂ ಹಂತಕ ಹುಲಿ ಕಣ್ಣಿಗೆ ಬಿದ್ದಿರಲಿಲ್ಲ.ಸಮೀಪದ ಗ್ರಾಮಗಳಿಗೆ ನುಗ್ಗುತ್ತಿದ್ದ ಹುಲಿ, ಮನುಷ್ಯರನ್ನು ಎಳೆದುಕೊಂಡು ಕ್ಷಣಾರ್ಧದಲ್ಲಿ ಮಾಯವಾಗುತ್ತಿತ್ತು. ಇದರಿಂದಾಗಿ ಮನೆಯಿಂದ ಹೊರಗೆ ಬರಲು ಜನ ಅಂಜುತ್ತಿದ್ದರು. ಇದೀಗ ಕಾರ್ಯಾಚರಣೆ ಮುಂದುವರೆಸಿ ಕೊನೆಗೂ ಹುಲಿಯನ್ನು ಹತ್ಯೆ ಮಾಡಲಾಗಿದೆ. ಮನುಷ್ಯರ ರುಚಿ ಕಂಡಿದ್ದ ಹುಲಿ ಗುಂಡೇಟಿಗೆ ಬಲಿಯಾಗಿದೆ. ಗ್ರಾಮಗಳ ಜನ ನಿಟ್ಟುಸಿರುಬಿಟ್ಟಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin