ಉಕ್ಕಿನ ಸೇತುವೆ ವಿನ್ಯಾಸ ಬದಲಿಸಲು ಹಿರಿಯ ವಿಜ್ಞಾನಿ ಪ್ರೊ .ಯು.ಆರ್.ರಾವ್ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

siddu
ಬೆಂಗಳೂರು, ಅ.26- ಹೆಬ್ಬಾಳದಿಂದ ಚಾಲುಕ್ಯ ರಸ್ತೆವರೆಗೂ ನಿರ್ಮಿಸಲು ಉದ್ದೇಶಿಸಿರುವ ಸ್ಟೀಲ್ ಬ್ರಿಡ್ಜ್‍ನಿಂದ ನೆಹರು ತಾರಾಲಯಕ್ಕೆ ಧಕ್ಕೆಯಾಲಿದ್ದು, ವಿನ್ಯಾಸ ಬದಲಾವಣೆ ಮಾಡುವಂತೆ ಹಿರಿಯ ವಿಜ್ಞಾನಿ ಪ್ರೊ .ಯು.ಆರ್.ರಾವ್ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಯು.ಆರ್.ರಾವ್ ಅವರು, ನೆಹರು ತಾರಾಲಯಕ್ಕೆ ಇತಿಹಾಸವಿದೆ. ಇಲ್ಲಿ ಅತ್ಯಮೂಲ್ಯ ಮತ್ತು ದುಬಾರಿ ಯಂತ್ರೋ ಪಕರಣಗಳಿವೆ.ಪ್ರತಿ ದಿನ ಸಾವಿರಾರು ಮಂದಿ ಇಲ್ಲಿಗೆ ಬಂದು ನಕ್ಷತ್ರ ವೀಕ್ಷಣೆ ಮಾಡುತ್ತಾರೆ.

ನೆಹರು ತಾರಾಲಯದ ಮೇಲೆ ಸ್ಟೀಲ್ ಬ್ರಿಡ್ಜ್ ನಿರ್ಮಿಸುವುದರಿಂದ ನಕ್ಷತ್ರಗಳ ವೀಕ್ಷಣೆಗೆ ಅಡ್ಡಿಯಾಗಲಿದೆ. ಉಕ್ಕಿನ ಸೇತುವೆಯಾಗಿರುವುದರಿಂದ ತರಂಗಾಂತರ ಸಂದೇಶಗಳನ್ನು ಸ್ವೀಕರಿಸಲು ಅಡ್ಡಿಯಾಗುತ್ತದೆ. ಹೀಗಾಗಿ ಸ್ಟೀಲ್ ಬ್ರಿಡ್ಜ್ ನಿರ್ಮಾಣದ ವಿನ್ಯಾಸವನ್ನು ಬದಲಾವಣೆ ಮಾಡಿ ನೆಹರು ತಾರಾಲಯಕ್ಕೆ ಅಡ್ಡಿಯಾಗದಂತೆ ಮಾರ್ಪಾಡು ಮಾಡುವಂತೆ ಮನವಿ ಮಾಡಿದರು.ಯು.ಆರ್.ರಾವ್ ಅವರ ಸುದೀರ್ಘ ಸೂಚನೆಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಲಾಗಿದೆ.ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸದ ಯು.ಆರ್.ರಾವ್ ಅವರು, ವಿನ್ಯಾಸ ಬದಲಾವಣೆ ಮಾಡುವಂತೆ ಮಾತ್ರ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin