ಉಗಾಂಡದಲ್ಲಿ ಭದ್ರತಾ ಪಡೆ-ಉಗ್ರರ ನಡುವೆ ಭೀಕರ ಷರ್ಷಣೆ : 55 ಜನ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Uganda

ಕಂಪಾಲ, ನ.28 – ಭದ್ರತಾ ಪಡೆಗಳು ಮತ್ತು ಪ್ರತ್ಯೇಕತಾವಾದಿ ಉಗ್ರಗಾಮಿಗಳ ನಡುವೆ ನಡೆದ ಭೀಕರ ಷರ್ಷಣೆಯಲ್ಲಿ ಕನಿಷ್ಠ 55 ಮಂದಿ ಹತರಾಗಿ, ಅನೇಕರು ಗಾಯಗೊಂಡಿರುವ ಘಟನೆ ಉಗಾಂಡದ ಕಸೆಸೆ ಪಟ್ಟಣದಲ್ಲಿ ನಡೆದಿದೆ. ಈ ಘರ್ಷಣೆಯಲ್ಲಿ 14 ಪೊಲೀಸ್ ಅಧಿಕಾರಿಗಳು ಮತ್ತು 41 ಉಗ್ರಗಾಮಿಗಳು ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ವಕ್ತಾರ ಅಂಡ್ರ್ಯೂ ಫೆಲಿಕ್ಸ್ ತಿಳಿಸಿದ್ದಾರೆ.  ರೂವೆನ್‍ಜುರುರು ಪ್ರಾಂತ್ಯದ ಬುಡಕಟ್ಟು ದೊರೆಗೆ ಸೇರಿದ ಈ ಉಗ್ರರು ಕೆಸೆಸೆ ಪಟ್ಟಣದಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಪಡೆ ಮೇಲೆ ಹಠಾತ್ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಉಗ್ರರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ಮತ್ತು ಘರ್ಷಣೆ ನಡೆಯಿತು ಎಂದು ಅವರು ತಿಳಿಸಿದ್ದಾರೆ. ಈ ಪ್ರಾಂತ್ಯದಲ್ಲಿ ಯೋಧರು ಮತ್ತು ಬಂಡುಕೋರರ ನಡುವೆ ಕೆಲವು ತಿಂಗಳುಗಳಿಂದ ಘರ್ಷಣೆ ನಡೆಯುತ್ತಲೇ ಇದ್ದು, ಭಾರೀ ಸಾವು-ನೋವುಗಳು ಸಂಭವಿಸಿವೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin