ಉಗ್ರರಿಂದ ಗ್ರೇನೆಡ್ ದಾಳಿ : ಸಿಆರ್‍ಪಿಎಫ್ ಯೋಧರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Graned--01

ಶ್ರೀನಗರ, ಜು.9-ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ದಾಳಿ ಪ್ರಕರಣಗಳು ಮಾಮೂಲಿ ಸಂಗತಿಯಂತಾಗಿದ್ದು, ಪುಲ್ವಾಮಾ ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರು ನಡೆಸಿದ ಗ್ರೇನೆಡ್ ಆಕ್ರಮಣದಲ್ಲಿ ಕೆಲವು ಸಿಆರ್‍ಪಿಎಫ್ ಯೋಧರು ಗಾಯಗೊಂಡಿದ್ದಾರೆ. ತ್ರಾಲ್ ಪಟ್ಟಣದ ಅರಿಬಲ್ ಪ್ರದೇಶದಲ್ಲಿ ನಿನ್ನೆ ರಾತ್ರಿ 10.30ರಲ್ಲಿ  ಸಿಆರ್‍ಪಿಎಫ್ ಮತ್ತು ಪೊಲೀಸ್ ಜಂಟಿ ಶಿಬಿರದ ಮೇಲೆ ಉಗ್ರರು ಗ್ರೇನೆಡ್ ಎಸೆದರು. ಈ ದಾಳಿಯಲ್ಲಿ ಕೆಲವರಿಗೆ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಫೋಟದಿಂದ ಗಾಯಗೊಂಡಿರುವ ಸಿಆರ್‍ಪಿಎಫ್ ಯೋಧರು ಮತ್ತು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin