ಉಗ್ರರಿಂದ 82 ಅಪಹೃತ ಶಾಲಾ ಬಾಲಕಿಯರ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

School-Girls--01

ಅಬುಜಾ, ಮೇ 7-ಬೊಕೊ ಹರಾಂ ಭಯೋತ್ಪಾದಕರಿಂದ ಕಳೆದ ಮೂರು ವರ್ಷಗಳ ಹಿಂದೆ ಅಪಹರಿಸಲ್ಪಟ್ಟಿದ್ದ 200 ಶಾಲಾ ವಿದ್ಯಾರ್ಥಿನಿಯರಲ್ಲಿ 82 ಬಾಲಕಿಯರನ್ನು ಬಿಡುಗಡೆಗೊಳಿಸಲಾಗಿದೆ ಎಂದು ನೈಜೀರಿಯಾ ಸರ್ಕಾರ ತಿಳಿಸಿದೆ. ಕಾರಾಗೃಹದಲ್ಲಿರುವ ಕೆಲವು ಬೊಕೊ ಉಗ್ರರನ್ನು ಬಿಡುಗಡೆಗೊಳಿಸುವ ಒಪ್ಪಂದದ ಮೇಲೆ ವಿನಿಮಯವಾಗಿ ಈ ಬಾಲಕಿಯರನ್ನು ಬಂಡುಕೋರರ ಕಪಿಮುಷ್ಟಿಯಿಂದ ವಿಮುಕ್ತಗೊಳಿಸಲಾಗಿದೆ.   ಅಪಹೃತ ವಿದ್ಯಾರ್ಥಿನಿಯರನ್ನು ಬಿಡುಗಡೆಗೊಳಿಸಲು ಕೆಲವು ತಿಂಗಳಿನಿಂದ ಮಾತುಕತೆ ನಡೆಯುತಿತ್ತು. ಈಗ ಕೆಲವು ಉಗ್ರರ ಬದಲಿಗೆ 82 ಬಾಲಕಿಯರನ್ನು ವಿಮೋಚನೆಗೊಳಿಸುವ ಸಂಧಾನ ಫಲಪ್ರದವಾಗಿದೆ ಎಂದು ಉನ್ನತಾಧಿಕಾರಿಗಳು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin