ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ಇಬ್ಬರು ದೇಶದ್ರೋಹಿ ಪೊಲೀಸರ ಬಂಧನ
ಶ್ರೀನಗರ, ಅ.11-ಕಣಿವೆ ರಾಜ್ಯ ಕಾಶ್ಮೀರಕ್ಕೆ ದೊಡ್ಡ ಗಂಡಾಂತರವಾಗಿರುವ ಭಯೋತ್ಪಾದಕರ ನಿಗ್ರಹಕ್ಕಾಗಿ ಭದ್ರತಾ ಸಿಬ್ಬಂದಿ ಪ್ರಾಣದ ಹಂಗು ತೊರೆದು ಹೋರಾಡುತ್ತಿದ್ದರೆ, ಇತ್ತ ಪೊಲೀಸರೇ ಪಾಕಿಸ್ತಾನಿ ಬೆಂಬಲಿತ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತಿತಿದ್ದ ದೇಶದ್ರೋಹದ ಆಘಾತಕಾರಿ ಸಂಗತಿ ಬಯಲಾಗಿದೆ.
ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತಿತಿರುವ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ (ಎಚ್ಎಂ) ಉಗ್ರರಿಗೆ ಶಸ್ತ್ರಾಸ್ತ್ರಗಳು ಮತುತಿ ಮದ್ದುಗುಂಡುಗಳನ್ನು ಪೂರೈಸುತಿತಿದ್ದ ಶೋಪಿಯಾನ್ನ ಇಬ್ಬರು ಪೊಲೀಸರನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತ ಜಮ್ಮು ಮತುತಿ ಕಾಶ್ಮೀರ ಪೊಲೀಸರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ದೇಶದ್ರೋಹ ಕೃತ್ಯಗಳಲ್ಲಿ ಮತತಿಷ್ಟು ಪೊಲೀಸರು ಶಾಮೀಲಾಗಿರುವ ಸಾಧ್ಯತೆ ಇದೆ.
ಶೋಪಿಯಾನ್ ಜಿಲ್ಲೆಯಲ್ಲಿ ನಿನ್ನೆಯಷ್ಟೇ ಭದ್ರತಾ ಸಿಬ್ಬಂದಿ ಮೂವರು ಎಚ್ಎಂ ಉಗ್ರರನ್ನು ಹೊಡೆದುರುಳಿಸಿದ್ದರು. 1989ರಿಂದಲೂ ಕಾಶ್ಮೀರದಲ್ಲಿ ಹಿಜ್ಬುಲ್ ಉಗ್ರರು ಸಕ್ರಿಯರಾಗಿದ್ದಾರೆ. ಭದ್ರತಾಪಡೆಗಳು ಮತುತಿ ಸಾರ್ವಜನಿಕರ ಮೇಲೆ ನಡೆದ ಹಲವಾರು ದಾಳಿಗಳಲ್ಲಿ ಈ ಭಯೋತ್ಪಾದಕರು ಶಾಮೀಲಾಗಿದ್ದಾರೆ.