ಉಗ್ರರ ಆತಂಕದ ನಡುವೆಯೇ ವಿಶ್ವದಾದ್ಯಂತ ಸಂಭ್ರಮದ ಕ್ರಿಸ್ಮಸ್ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

christmas

ಬೆಥ್ಲೆಹೇಮ್, ಡಿ.25-ಒಂದೆಡೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ದಾಳಿ ಭೀತಿ, ಇನ್ನೊಂದೆಡೆ ಯುದ್ಧ, ಆರ್ಥಿಕ ಹಿಂಜರಿತದ ಆತಂಕದ ನಡುವೆ ಬೆಥ್ಲೆಹೇಮ್‍ನಿಂದ ವ್ಯಾಟಿಕನ್‍ವರೆಗೆ ವಿಶ್ವದಾದ್ಯಂತ ಸಡಗರ-ಸಂಭ್ರಮದಿಂದ ಕ್ರಿಸ್ಮಸ್ ಆಚರಿಸಲಾಯಿತು. ಮನುಕುಲದ ಉದ್ಧಾರಕ್ಕಾಗಿ ಏಸುಕ್ರಿಸ್ತ ಜನಿಸಿದ ಜೆರುಸಲೇಂನ ಬೆಥ್ಲೆಹೇಮ್‍ನಲ್ಲಿ ನಿನ್ನೆ ಮಧ್ಯರಾತ್ರಿ ನಡೆದ ಸಮಾರಂಭವೊಂದರಲ್ಲಿ ನೆಟಿವಿಟಿ ಚರ್ಚ್‍ನಲ್ಲಿ ಸಾವಿರಾರು ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕ್ರಿಸ್ಮಸ್ ಸಂದೇಶ ಸಾರಿದ ಆರ್ಚ್ ಬಿಷಪ್ ಪಿಯರ್ ಬಟಿಸ್ಟಾ ಫಿಜಾಬೆಲ್ಲಾ, ಮಧ್ಯಪ್ರಾಚ್ಯ ಪ್ರಾಂತ್ಯಗಳಲ್ಲಿ ಹಿಂಸಾಚಾರ ಕೊನೆಗೊಳಿಸಲು ಜಗತ್ತಿನ ಎಲ್ಲ ದೇಶಗಳು ನೆರವಾಗಬೇಕೆಂದರು. ಪ್ಯಾಲೆಸ್ತೀನ್ ಅಧ್ಯಕ್ಷ ಮಹಮದ್ ಅಬ್ಬಾಸ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ್ಯಾಥೋಲಿಕ್ ಕ್ರೈಸ್ತರ ಪವಿತ್ರ ನಗರಿ ವ್ಯಾಟಿಕನ್ ಸಿಟಿಯಲ್ಲಿ ನಡೆದ ಮಿಡ್‍ನೈಟ್ ಮಾಸ್‍ನಲ್ಲಿ ಸಹಸ್ರಾರು ಮಂದಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬರ್ಲಿನ್ ಕ್ರಿಸ್ಮಸ್ ಮಾರುಕಟ್ಟೆಯ ಮೇಲೆ ಐಎಸ್ ಉಗ್ರರು ನಡೆಸಿದ ಟ್ರಕ್ ದಾಳಿ ಭಯದ ನೆರಳಿನಲ್ಲಿ ಯೂರೋಪ್ ವಿವಿಧ ದೇಶದಲ್ಲಿ ಸಡಗರದಿಂದ ಕ್ರಿಸ್ಮಸ್ ಆಚರಿಸಲಾಯಿತು.

ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ನಡೆದ ಕ್ರಿಸ್ಮಸ್ ಸಮಾರಂಭಗಳಲ್ಲಿ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಆಫ್ರಿಕಾ ಮತ್ತು ಏಷ್ಯಾ ಖಂಡಗಳ ಅನೇಕ ಪ್ರಾಂತ್ಯಗಳಲ್ಲೂ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿತು. ಭಾರತದಲ್ಲೂ ಕ್ರಿಸ್ಮಸ್ ಸಡಗರ:ಭಾರತದಲ್ಲೂ ಎಲ್ಲ ರಾಜ್ಯಗಳಲ್ಲೂ ಸಡಗರ-ಸಂಭ್ರಮದಿಂದ ಕ್ರಿಸ್ಮಸ್ ಆಚರಿಸಲಾಯಿತು. ಕರಾವಳಿ ರಾಜ್ಯ ಗೋವಾದ ಸೇಂಟ್ ಪ್ರಾನ್ಸಿಸ್ ಕ್ಸೇವಿಯರ್ ಚರ್ಚ್, ವೇಲಾಂಕಾಶಿಯ ಸೇಂಟ್ ಬ್ಯಾಸಿಲಿಕಾ, ಕೋಲ್ಕತ್ತಾದ ಪ್ರಧಾನ ಚರ್ಚ್ ಸೇರಿದಂತೆ ದೇಶದ ವಿವಿಧ ಪ್ರಸಿದ್ಧ ಚರ್ಚ್‍ಗಳಲ್ಲಿ ನಡೆದ ವಿಶೇಷ ಸಮಾರಂಭಗಳಲ್ಲಿ ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin