ಉಗ್ರರ ಪೈಶಾಚಿಕ ಕೃತ್ಯಕ್ಕೆ ಖಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

MADHUGIRI

ಮಧುಗಿರಿ, ಸೆ.23- ಉರಿ ವಲಯದಲ್ಲಿನ ಸೇನಾ ನೆಲೆಗೆ ನುಗ್ಗಿ ದಾಳಿ ನಡೆಸಿದ್ದ ಪಾಕಿಸ್ತಾನ ಮೂಲದ ಉಗ್ರರ ಪೈಶಾಚಿಕ ಕೃತ್ಯವನ್ನು ಬಿ.ಜೆ.ಪಿ ಮಂಡಲ ಅಧ್ಯಕ್ಷ ಎಸ್.ಇ ರಮೇಶ್ ರೆಡ್ಡಿ ತೀವ್ರವಾಗಿ ಖಂಡಿಸಿದರು.ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬಿ.ಜೆ.ಪಿ ಪಕ್ಷದ ವತಿಯಿಂದ ಉರಿ ಸೇನಾವಲಯದಲ್ಲಿ ಹುತಾತ್ಮ ವೀರ ಯೋಧರಿಗೆ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಹುತಾತ್ಮರಾದ ಯೋಧರಿಗೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆ ನಡೆಸಿ ಅವರು ಮಾತನಾಡಿದರು.

ನಮ್ಮ ಸೈನಿಕರ ಎದರು ನಿಲ್ಲಲು ಭಯ ಪಡುವ ಪಾಕಿಸ್ಥಾನದ ಉಗ್ರರು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಶಾಂತಿಯಿಂದ ಸಹಬಾಳ್ವೆ ನಡೆಸುತ್ತಿರುವ ನಮ್ಮ ದೇಶದಲ್ಲಿ ಇಂತಹ ಹಿಂಸಾತ್ಮಕ ಚಟುವಟಿಕೆ ನಡೆಸಿ ಶಾಂತಿ ಕದಡುವವರಿಗೆ ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಈ ದಾಳಿಯಲ್ಲಿ ಹುತಾತ್ಮರಾದ 18 ಜನ ವೀರ ಯೋಧರು ಭಾರತಾಂಬೆ ಮಡಿಲಲ್ಲಿ ಮತ್ತೆ ಹುಟ್ಟಿ ಬರಲಿ ಎಂದು ಆಶಿಸಿದರು.ಸಭೆಯಲ್ಲಿ ಬಿ.ಜೆ.ಪಿ ಮುಖಂಡರುಗಳಾದ ಸುನೀಲ್, ಸುರೇಶ್, ಬಿ.ಪಿ ನಾರಾಯಣ್, ನಾಗೇಂದ್ರ, ಲಕ್ಷ್ಮೀನರಸಿಂಹ, ರಂಗನಾಥ್, ರಾಜು, ಉಮೇಶ್ ಹಾಗು ಮುಂತಾದವರು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin