ಉಗ್ರರ ಬಗ್ಗೆ ರಾಜ್ಯ ಪೊಲೀಸರ ನಿರ್ಲಕ್ಷ್ಯ..?

ಈ ಸುದ್ದಿಯನ್ನು ಶೇರ್ ಮಾಡಿ

gsrghshgsfdhgಬೆಂಗಳೂರು, ಆ.4- ಉಗ್ರರ ಅಟ್ಟಹಾಸಕ್ಕೆ ಇಡೀ ವಿಶ್ವವೇ ನಡುಗುತ್ತಿದೆ. ರಾಜ್ಯದಲ್ಲೂ ಭಯೋತ್ಪಾದಕರ ಉಪಟಳಕ್ಕೆ ಅಮಾಯಕರು ಬಲಿಯಾಗಿದ್ದಾರೆ. ರಾಜ್ಯ ಪೊಲೀಸ್ ಇಲಾಖೆ ಭಯೋತ್ಪಾದಕರ ಬಗ್ಗೆ ನಿರ್ಲಕ್ಷ್ಯ ವಹಿಸಿದೆಯೇ? ಎಂಬ ಅನುಮಾನ ಕಾಡುತ್ತಿದೆ.  ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ ಅನ್ನೋ ಹಾಗೆ ಭಯೋತ್ಪಾದಕ ಕೃತ್ಯ ನಡೆದಾಗ ಮಾತ್ರ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ಇದೆ! ದೇಶದಲ್ಲಿ ಸುಮಾರು 38 ನಿಷೇಧಿತ ಉಗ್ರ ಸಂಘಟನೆಗಳಿವೆ.   ಇದರಲ್ಲಿ ಕೆಲ ಸಂಘಟನೆಗಳು ಸ್ಥಗಿತಗೊಂಡು  ಹೊಸ ಹೆಸರಿನಲ್ಲಿ ಸಕ್ರಿಯವಾಗತೊಡಗಿವೆ. ಮತ್ತೆ ಕೆಲ ಸಂಘಟನೆಗಳು ಬಲಿಷ್ಟವಾಗುವ ಉದ್ದೇಶದಿಂದ ಮತ್ತೊಂದು ಸಂಘಟನೆ ಜತೆ ವಿಲೀನಗೊಂಡು ದೇಶದಲ್ಲಿ ದುಷ್ಕøತ್ಯ ಮುಂದುವರಿಸುತ್ತಿವೆ. ಉಗ್ರರ ಬಗ್ಗೆ ಇಡೀ ವಿಶ್ವವೇ ತಲೆಕೆಡಿಸಿಕೊಂಡಿರುವಾಗ ರಾಜ್ಯದ ಪೊಲೀಸರಿಗೆ ಉಗ್ರ ಸಂಘಟನೆಗಳ ಮಾಹಿತಿಯೇ ಇಲ್ಲ ಎನ್ನುವುದು ಅಚ್ಚರಿ ಹಾಗೂ ಆತಂಕ ಮೂಡಲು ಕಾರಣವಾಗಿದೆ.
ನಿಯಮದ ಪ್ರಕಾರ ದೇಶದಲ್ಲಿರುವ ಎಲ್ಲ ಉಗ್ರ ಸಂಘಟನೆಗಳ ಪೂರ್ವಾಪರ, ಸದಸ್ಯರ ಸಂಖ್ಯೆ, ಅವರ ಉದ್ದೇಶವೇನು, ಯಾವ ಪ್ರದೇಶ, ಅವರ ಟಾರ್ಗೆಟ್ ಏನು ಎಂಬುದನ್ನು ದಾಖಲೆ ಸಮೇತ ಸಂಪೂರ್ಣ ಮಾಹಿತಿ ಸಂಗ್ರಹಿಸಿಡಬೇಕು. ಆದರೆ, ರಾಜ್ಯದ ಪೊಲೀಸರು ಇದ್ಯಾವುದನ್ನು ಮಾಡುವ ಗೋಜಿಗೆ ಹೋಗಿಲ್ಲ ಎನ್ನಲಾಗಿದೆ. ಅಲ್ಖೈದಾ, ಇಂಡಿಯನ್ ಮುಜಾಹಿದ್ದೀನ್, ಲಷ್ಕರ್-ಎ-ತೊಯ್ಬ, ಅಲïಉಮಾ, ಸಿಮಿ ಮತ್ತು ಐಸಿಸ್ ಸೇರಿ ಕೆಲ ಉಗ್ರ ಸಂಘಟನೆಗಳ ಹೆಸರುಗಳು ಮಾತ್ರ ಗೊತ್ತಿದೆ. ಆ ಸಂಘಟನೆಗಳ ಹಿನ್ನೆಲೆಯೂ ತಿಳಿದಿಲ್ಲ. ಈ ಉದಾಸೀನ ಧೋರಣೆ ಉಗ್ರ ಕೃತ್ಯಗಳ ಹತ್ತಿಕ್ಕಲು ಹಾಗೂ ಭಯೋತ್ಪಾದಕ ಸಂಬಂಧಿತ ಪ್ರಕರಣದ ತನಿಖೆ ಮೇಲೆ ಪ್ರತಿಕೂಲ ಪರಿಣಾಮ ಭೀರುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ನಿಷೇಧಿತ ಪ್ರಮುಖ ಉಗ್ರ ಸಂಘಟನೆಗಳು:
ಅಲ್ಖೈದಾ, ಅಲ್ ಉರ್ಮ ಮುಜಾಹಿದ್ದೀನ್  ಅಲ್ ಬದ್ರರ್, ಅಖಿಲ್ ಭಾರತ್ ನೇಪಾಳಿ ಏಕ್ತಾ ಸಮಾಜ್, ಬಬ್ಬರ್ ಖಾಲ್ಸï ಇಂಟರ್ ನ್ಯಾಷನಲ್, ದೀನ್ದಯಾಳ್ ಅಂಜುಮನ್, ದುಖ್ತರನ್ ಇ ಮಿಲ್ಲತ್, ಜಿಎನ್ಎಲïಎ, ಹರ್ಕತ್ ಉಲ್ ಮುಜಾಹಿದ್ದೀನ್, ಹಿಜ್ಬುಲ್ ಮುಜಾಹಿದ್ದೀನ್, ಇಂಡಿಯನ್ ಮುಜಾಹಿದ್ದೀನ್, ಐಸೀಸ್, ಜೈಷ್ ಇ ಮಹಮದ್, ಜೆಯುಎಂ, ಜಮ್ಮು ಆ್ಯಂಡ್ ಕಾಶ್ಮೀರ  ಇಸ್ಲಾಮಿಕ್ ಫ್ರಂಟ್, ಸಿಮಿ, ಟಿಎನ್ಎಲïಎ, ಯುಎಲ್ಎಫ್ಎ, ಎನ್ಡಿಎಫ್ಟಿ ಸೇರಿದಂತೆ 38 ಸಂಘಟನೆಗಳಿವೆ.
ವಿಶೇಷ ಪಡೆ ಅಗತ್ಯ:
ಮಹಾರಾಷ್ಟ್ರ ಪೊಲೀಸ್ ಇಲಾಖೆ ಮಾತ್ರ ದೇಶದಲ್ಲಿ ಸಕ್ರಿಯವಾಗಿರುವ ಎಲ್ಲ ಉಗ್ರ ಸಂಘಟನೆಗಳು ಮತ್ತು ಅದರ ಸದಸ್ಯರ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಲು ಪ್ರತ್ಯೇಕ ಭಯೋತ್ಪಾದಕ ನಿಗ್ರಹ ದಳ(ಎಟಿಎಸ್) ಸ್ಥಾಪಿಸಿದೆ. ಉಗ್ರ ಸಂಘಟನೆಗಳು, ಬಾಂಬ್ ಸ್ಫೋಟ ಪ್ರಕರಣಗಳು, ಬಂಧಿತ ಉಗ್ರರು ಮತ್ತು ತನಿಖಾ ಪ್ರಗತಿಯನ್ನು ತಪ್ಪದೆ ದಾಖಲು ಮಾಡಿದ್ದಾರೆ. ಮಹಾರಾಷ್ಟ್ರ ಬಿಟ್ಟರೆ ಬೇರೆ ಯಾವ ರಾಜ್ಯವೂ ಇಷ್ಟು ವ್ಯವಸ್ಥಿತವಾಗಿ ಉಗ್ರರ ಬಗ್ಗೆ ಮಾಹಿತಿ ಸಂಗ್ರಹಿಸಿಲ್ಲವೆಂದು ಸಿಸಿಬಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಧೂಳು ತಿನ್ನುತ್ತಿದೆ ಪ್ರಸ್ತಾವನೆ :
ಉಗ್ರರ ಮಾಹಿತಿ ಕಲೆಹಾಕಲು ರಾಜ್ಯದಲ್ಲಿ ಆಂತರಿಕ ಭದ್ರತಾ ವಿಭಾಗದಲ್ಲಿ (ಐಎಸ್ಡಿ) ಭಯೋತ್ಪಾದಕ ನಿಗ್ರಹ ದಳ ತೆರೆಯಲಾಗಿದೆ. ಆದರೆ, ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಐಎಸ್ಡಿ ಸುಪರ್ದಿಗೆ ಬದಲು ಸಿಸಿಬಿ ಘಟಕ ವ್ಯಾಪ್ತಿಗೆ ಒಳಪಡುವಂತೆ ಪ್ರತ್ಯೇಕ ಎಟಿಎಸ್ ಸ್ಥಾಪಿಸಿ ಬಲಪಡಿಸುವಂತೆ ಈ ಹಿಂದೆಯೇ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಈ ಬಗ್ಗೆ ಸರ್ಕಾರ ಗಮನಹರಿಸಿಲ್ಲ ಎಂದು ತಿಳಿದುಬಂದಿದೆ.
ತನಿಖಾಧಿಕಾರಿಗಳಿಗೆ ಕಿರಿಕಿರಿ :
ಭಯೋತ್ಪಾದಕ ಸಂಬಂಧಿತ ಪ್ರಕರಣಗಳ ತನಿಖೆ ನಡೆಸುವ ಅಧಿಕಾರಿಗಳು, ಆ ಪ್ರಕರಣದ ಬಗ್ಗೆ ಬೇಕಾಗುವ ವಿಚಾರಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸುತ್ತಾರೆ.  ಆದರೆ, ಆ ಅಧಿಕಾರಿ ಸಂಗ್ರಹಿಸಿದ ಮಾಹಿತಿಯನ್ನು ದಾಖಲಿಸುವ ವ್ಯವಸ್ಥೆ ಇಲ್ಲದಿರುವುದರಿಂದ ಆ ಅಧಿಕಾರಿ ವರ್ಗಾವಣೆಯಾದ ನಂತರ ಅವರು ಕಲೆಹಾಕಿದ ಮಾಹಿತಿಯೂ ಅವರ ಜತೆಯಲ್ಲೇ ಹೋಗುತ್ತದೆ. ಹೊಸದಾಗಿ ಬರುವ ಅಧಿಕಾರಿ ಮತ್ತೆ ಆರಂಭದಿಂದ ಮಾಹಿತಿ ಸಂಗ್ರಹಿಸಬೇಕು. ಇದರಿಂದ ಪ್ರಕರಣದ ತನಿಖೆ ವಿಳಂಬವಾಗಲು ಕಾರಣವಾಗುತ್ತದೆ ಎನ್ನುವುದು ಇಲಾಖೆಯ ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

್ಚ

Facebook Comments

Sri Raghav

Admin