ಉಗ್ರರ ಲಿಸ್ಟ್’ನಿಂದ ತನ್ನ ಹೆಸರನ್ನು ತೆಗೆದು ಹಾಕುವಂತೆ ಪಾಕ್‍ಗೆ ಸಯೀದ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Hafeex-Syeed

ಲಾಹೋರ್, ಫೆ.16-ದೇಶ ಬಿಟ್ಟು ಹೋಗದಂತೆ ನಿರ್ಬಂಧದಲ್ಲಿರುವವರ ಪಟ್ಟಿಯಿಂದ (ನಿರ್ಗಮನ ನಿಯಂತ್ರಣ ಪಟ್ಟಿ-ಇಸಿಎಲ್) ತನ್ನ ಹೆಸರನ್ನು ತೆಗೆದು ಹಾಕುವಂತೆ ಪ್ರಸ್ತುತ ಗೃಹ ಬಂಧನದಲ್ಲಿರುವ ಮುಂಬೈ ದಾಳಿಯ ಸೂತ್ರಧಾರ ಹಾಗೂ ಜಮಾತ್-ಉದ್ ದವಾ ಮುಖ್ಯಸ್ಥ ಹಫೀಝ್ ಸಯೀದ್ ಪಾಕಿಸ್ತಾನ ಸರ್ಕಾರವನ್ನು ಆಗ್ರಹಿಸಿದ್ದಾನೆ.  ಈ ಕುರಿತು ಗೃಹ ಸಚಿವ ಚೌಧರಿ ನಿಸಾಸ್ ಅಲಿ ಖಾನ್ ಅವರಿಗೆ ಪತ್ರ ಬರೆದಿರುವ ಸಯೀದ್, ತಮ್ಮ ಸಂಘಟನೆಯು ಯಾವುದೇ ಭಯೋತ್ಪಾದನೆ ಕೃತ್ಯಗಳಲ್ಲಿ ಶಾಮೀಲಾಗಿಲ್ಲ ಎಂದು ಹೇಳಿದ್ದಾನೆ. 38 ವ್ಯಕ್ತಿಗಳು ದೇಶ ಬಿಟ್ಟು ಹೋಗದಂತೆ ನಿರ್ಬಂಧಿಸಿರುವ ಜನವರಿ 30, 2017ರ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ್ದಾನೆ.

ಪಾಕಿಸ್ತಾನ ಸರ್ಕಾರವು ಕಳೆದ ತಿಂಗಳು ಸಯೀದ್ ಸೇರಿದಂತೆ ಈತನ ನೇತೃತ್ವದ ಜೆಯುಡಿ ಮತ್ತು ಫಲ್ಹಾ-ಎ-ಇನ್ಸಾನಿಯತ್ ಚಾರಿಟಿ ಸಂಘಟನೆಯ 38 ಜನರನ್ನು ಈ ಪಟ್ಟಿಗೆ ಸೇರಿಸಿ, 90 ದಿನಗಳ ಗೃಹಬಂಧನದಲ್ಲಿರಿಸಿತ್ತು.  166 ಜನರನ್ನು ಬಲಿ ತೆಗೆದುಕೊಂಡಿದ್ದ 2008ರ ಮುಂಬೈ ಭಯೋತ್ಪಾದಕರ ದಾಳಿಯಲ್ಲಿ ಈತನ ಕೈವಾಡ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin