ಉಗ್ರರ ವಿರುದ್ಧ ಇಂದೂ ಮುಂದುವರಿದ ಸೇನೆ ಕಾರ್ಯಾಚರಣೆ, ಹೆಲಿಕಾಪ್ಟರ್, ಡ್ರೋನ್ ಸಾಥ್

ಈ ಸುದ್ದಿಯನ್ನು ಶೇರ್ ಮಾಡಿ

Kashmir--01

ಶ್ರೀನಗರ, ಮೇ 5-ಕಾಶ್ಮೀರ ಕಣಿವೆಯಲ್ಲಿ ಮತ್ತೆ ಮತ್ತೆ ಹಿಂಸಾಚಾರಗಳ ಮೂಲಕ ಅಟ್ಟಹಾಸ ಮೆರೆಯುತ್ತಿರುವ ಪಾಕಿಸ್ತಾನ ಪ್ರಾಯೋಜಿತ ಉಗ್ರಗಾಮಿಗಳ ಪತ್ತೆಯಾಗಿ ನಿನ್ನೆಯಿಂದ ಆರಂಭವಾದ ಅತಿದೊಡ್ಡ ಸೇನಾ ಕಾರ್ಯಾಚರಣೆ ಕೈಗೊಂಡಿದೆ. ಆಪರೇಷನ್ ಟೆರ್ರರ್ ಹೆಸರಿನ ಈ ಕಾರ್ಯಾಚರಣೆಯಲ್ಲಿ 4,000ಕ್ಕೂ ಹೆಚ್ಚು ಯೋಧರು ಪಾಲ್ಗೊಂಡಿದ್ದಾರೆ. ಜೊತೆಗೆ ಸೇನಾ ಹೆಲಿಕಾಪ್ಟರ್ ಮತ್ತು ಡ್ರೋನ್‍ಗಳು ಭಯೋತ್ಪಾದಕರ ಪತ್ತೆಗೆ ಸಾಥ್ ನೀಡುತ್ತಿವೆ. ಮನೆ ಮನೆಗೆ ತೆರಳಿ ಉಗ್ರರಿಗಾಗಿ ಜಾಲಾಡಲಾಗುತ್ತಿದೆ.   ಹದಿನೈದು ವರ್ಷಗಳ ಬಳಿಕ ಉಗ್ರರ ವಿರುದ್ಧ ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಭಾರೀ ಸೇನಾ ಕಾರ್ಯಾಚರಣೆ ಇದಾಗಿದೆ. ದಕ್ಷಿಣ ಕಾಶ್ಮೀರದ ಗಡಿ ಭಾಗದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಸೋಫಿಯಾನ್ ಜಿಲ್ಲೆಯ ನಿನ್ನೆ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಮುಂದುವರೆದಿತ್ತು.ಇದೇ ವೇಳೆ, ಪ್ರತ್ಯೇಕತಾವಾದಿಗಳ ಬೆಂಬಲಿಗರು ಮತ್ತು ಪ್ರತಿಭಟನಾಕಾರರು ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿ ಭಯೋತ್ಪಾದಕರ ಪತ್ತೆ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದ್ದರು.   ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪಡೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಇಂದು ಬೆಳಗ್ಗೆಯಿಂದಲೇ ಉಗ್ರರ ಶೋಧ ಕಾರ್ಯವನ್ನು ಚುರುಕುಗೊಳಿಸಿದರು. ಅನೇಕ ಗ್ರಾಮಗಳನ್ನು ಸುತ್ತುವರಿದಿರುವ ಜಂಟಿ ಶೋಧ ಕಾರ್ಯಪಡೆ ಭಯೋತ್ಪಾದಕರಿಗಾಗಿ ಜಾಲಾಡುತ್ತಿದೆ.  ಪಾಕಿಸ್ತಾನ ಆಕ್ರಮಿಕ ಕಾಶ್ಮೀರದಲ್ಲಿ ಉಗ್ರರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ ನಂತರ ಮತ್ತು ಹಿಜ್‍ಬುಲ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ನಂತರ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ಉಪಟಳ ತೀವ್ರಗೊಂಡಿದೆ.

ನವದೆಹಲಿ ವರದಿ:

ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎನ್.ಎನ್.ವೋರಾ ಇದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕಾಶ್ಮೀರದಲ್ಲಿ ತಲೆದೋರಿರುವ ಪರಿಸ್ಥಿತಿ ಮತ್ತು ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿ ಚರ್ಚಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin