ಉಗ್ರರ ವಿರುದ್ಧ ಪಾಕ್ ನಿರ್ಣಾಯಕ ಕ್ರಮ ಕೈಗೊಂಡಿಲ್ಲ : ಅಮೆರಿಕ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

America--01

ವಾಷಿಂಗ್ಟನ್, ಫೆ.28-ಪಾಕಿಸ್ತಾನವು ತಾಲಿಬಾನ್ ಮತ್ತು ಹಖಾನಿಯಂಥ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕಿಸ್ತಾನವು ನಿರ್ಣಾಯಕ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕದ ಹಿರಿಯ ಸೇನಾ ಕಮಾಂಡರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವು ಉಗ್ರಗಾಮಿ ಬಣಗಳು ಮತ್ತು ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಮೆರಿಕ ತಾಕೀತು ಮಾಡುತ್ತಿರುವ ಬೆನ್ನಲ್ಲೇ ಅಮೆರಿಕದ ಸೇನಾ ಜನರಲ್ ಜೋಸೆಫ್ ವೊಟೆಲ್ ಪ್ರತಿಕ್ರಿಯೆ ನೀಡಿದ್ದಾರೆ.   ಭಯೋತ್ಪಾದಕರಿಗೆ ಆಶ್ರಯ ನೀಡಿರುವ ಪಾಕಿಸ್ತಾನದ ವಿರುದ್ಧ ಅಮೆರಿಕ ಈಗಾಗಲೇ ಎರಡು ಶತಕೋಟಿ ಡಾಲರ್‍ಗಳ ಭದ್ರತಾ ನೆರವು ಹಿಂದಕ್ಕೆ ಪಡೆದಿದೆ.

Facebook Comments

Sri Raghav

Admin