ಉಗ್ರ ಸಯೀದ್‍ ಡೇಂಜರಸ್ ಎಂದು ಕೊನೆಗೂ ಒಪ್ಪಿಕೊಂಡ ಪಾಕ್

ಈ ಸುದ್ದಿಯನ್ನು ಶೇರ್ ಮಾಡಿ

Hafeex-Syeed

ಲಾಹೋರ್, ಫೆ.21-ಭಯೋತ್ಪಾದನೆ ನಿಗ್ರಹ ಕಾನೂನಿನ ಅಡಿ ಉಗ್ರರ ಪಟ್ಟಿಗೆ ಸೇರ್ಪಡೆಯಾಗಿರುವ ಜಮಾತ್-ಉದ್-ದವಾ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್‍ನಿಂದ ತನಗೂ ದೊಡ್ಡ ಮಟ್ಟದ ಗಂಡಾಂತರ ಇದೆ ಎಂಬ ವಾಸ್ತವ ಸಂಗತಿಯನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ತಾನು ಹಾಲೆರೆದು ಪೋಷಿಸಿದ ಭಯೋತ್ಪಾದನೆ ಎಂಬ ಘಟಸರ್ಪ ಈಗ ತನ್ನ ನೆಲದಲ್ಲೇ ಫೂತ್ಕರಿಸುತ್ತಾ ವಿಷ ಕಾರುತ್ತಿರುವ ಬಗ್ಗೆ ಪಾಕಿಸ್ತಾನಕ್ಕೆ ಈಗ ಜ್ಞಾನೋದಯವಾದಂತಿದೆ.   ಸಯೀದ್ ಪಾಕಿಸ್ತಾನಕ್ಕೂ ಗಂಭೀರ ಆತಂಕ ಉಂಟು ಮಾಡಬಹುದು ಎಂಬ ಕಾರಣಕ್ಕಾಗಿಯೇ ದೇಶದ ಹಿತಾಸಕ್ತಿಯಿಂದ ಆತನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿಕೆ ನೀಡಿ ಭಾರತದ ನಿಲುವಿಗೆ ಸಮರ್ಥನೆ ಒದಗಿಸಿದ್ದಾರೆ.

ಜರ್ಮನಿಯ ಮ್ಯುನಿಚ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಭದ್ರತಾ ಸಮಾವೇಶದಲ್ಲಿ ಈ ಹೇಳಿಕೆ ನೀಡುವ ಮೂಲಕ ಆಸಿಫ್, ಆತನಿಂದ ತಮ್ಮ ದೇಶಕ್ಕೂ ಆತಂಕವಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಸಯೀದ್‍ನನ್ನು ಕಾನೂನು ಕುಣಿಕೆಗೆ ಒಳಪಡಿಸಬೇಕೆಂಬ ಭಾರತದ ಹೋರಾಟಕ್ಕೆ ಮತ್ತಷ್ಟು ಪುಷ್ಟಿ ದೊರೆತಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin