ಉಗ್ರ ಹಫೀಜ್ ಜೊತೆ ರಾಜಕೀಯ ಮೈತ್ರಿಗೆ ಮುಂದಾದ ಮುಷರ್ರಫ್

ಈ ಸುದ್ದಿಯನ್ನು ಶೇರ್ ಮಾಡಿ

Mushraf--02

ಇಸ್ಲಾಮಾಬಾದ್, ಡಿ.6-ತಾವು ಲಷ್ಕರ್-ಇ-ತೈಬಾ ಉಗ್ರಗಾಮಿ ಸಂಘಟನೆಯ ದೊಡ್ಡ ಬೆಂಬಲಿಗ ಎಂದು ಹೇಳಿಕೊಂಡಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಈಗ ಮುಂಬೈ ಭಯೋತ್ಪಾದಕ ದಾಳಿ ಸೂತ್ರಧಾರ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ (ಜೆಯುಡಿ) ಉಗ್ರ ಬಣದೊಂದಿಗೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಮೈತ್ರಿಗೂ ಮುಂದಾಗಿದ್ದಾರೆ.

ಪಾಕಿಸ್ತಾನದ ಮುಂದಿನ ಮಹಾ ಚುನಾವಣೆಯಲ್ಲಿ ನಿಷೇಧಿತ ಭಯೋತ್ಪಾದನೆ ಸಂಘಟನೆ ಜೆಯುಡಿ ಮತ್ತು ಅದರ ಮುಖ್ಯಸ್ಥ ಹಫೀಜ್ ಜೊತೆ ರಾಜಕೀಯ ಮೈತ್ರಿಗೆ ತಾವು ಮುಕ್ತ ಮನಸ್ಸು ಹೊಂದಿರುವುದಾಗಿ ಮಾಜಿ ಸರ್ವಾಧಿಕಾರಿ ಮುಷರ್ರಫ್ ಆಜ್ ನ್ಯೂಸ್‍ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಸಂಬಂಧ ಈವರೆಗೂ ಯಾವುದೇ ಮಾತುಕತೆ ನಡೆದಿಲ್ಲ. ಆದರೆ ಮೈತ್ರಿಗೆ ಹಫೀಜ್ ಮತ್ತು ಅವರ ಸಂಘಟನೆ ಬಯಸುವುದಾದರೆ ನಾನು ಅದನ್ನು ಸರ್ವ ರೀತಿಯಲ್ಲಿಯೂ ಸ್ವಾಗತಿಸುತ್ತೇನೆ ಎಂದು ಮುಷರ್ರಫ್ ತಿಳಿಸಿದ್ಧಾರೆ. ಮುಷರ್ರಫ್ ಇತ್ತೀಚೆಗೆ 23 ಪಕ್ಷಗಳ ನೂತನ ಮಹಾ ಮೈತ್ರಿಕೂಟವೊಂದನ್ನು ರಚಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments

Sri Raghav

Admin